ಗಂಜಿಗಟ್ಟಿ ಗ್ರಾಮದೇವಿಗೆ 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಅರ್ಪಣೆ

Hubballi Dhwani
ಗಂಜಿಗಟ್ಟಿ ಗ್ರಾಮದೇವಿಗೆ 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಅರ್ಪಣೆ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 55;
WhatsApp Group Join Now
Telegram Group Join Now

ಗಂಜಿಗಟ್ಟಿ ಗ್ರಾಮದೇವಿಗೆ 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಅರ್ಪಣೆ

ಕಲಘಟಗಿ: ಧಾರವಾಡ ಜಿಲ್ಲೆಯಲ್ಲಿಯೇ ಅತೀ ಎತ್ತರದ ಮೂರ್ತಿಗಳ ಜಾತ್ರೆ ಎಂದೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಗಂಜಿಗಟ್ಟಿ ಗ್ರಾಮದ ಗ್ರಾಮದೇವಿ ಜಾತ್ರೆಯ ಅಂಗವಾಗಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದವರು ಹಾಗೂ ಹಳೆಯ ವಿದ್ಯಾರ್ಥಿಗಳು 10 ಲಕ್ಷಕ್ಕೂ ಅಧಿಕ ಚಿನ್ನಾಭರಣವನ್ನು ಸಮರ್ಪಿಸಿ ಮಾದರಿಯಾಗಿದ್ದಾರೆ ಎಂದು ಗ್ರಾಮದ ಹಿರಿಯರಾದ ಭೀಮಣ್ಣ ಗಾಣಿಗೇರ ಹಾಗೂ ಕಲ್ಲಯ್ಯ ಕುರಡಿಕೇರಿ ಹೇಳಿದರು.

ಗ್ರಾಮದಲ್ಲಿ ಮಾತನಾಡಿದ ಅವರು, ಮಾ.21ರಿಂದ ಆರಂಭವಾಗಿರುವ ಜಾತ್ರೆಗೆ ಗ್ರಾಮದ ಮಹಿಳೆಯರೆಲ್ಲರೂ ಸೇರಿ 6.5 ಲಕ್ಷ ರೂ. ಹಣವನ್ನು ಸಂಗ್ರಹಿಸಿ ದೇವಿಗೆ 40 ಗ್ರಾಂ ದೇವಿಹಾರ, 20 ಗ್ರಾಂ ಕಿವಿವೊಲೆ ಸೇರಿದಂತೆ ಚಿನ್ನಾಭರಣವನ್ನು ಸಮರ್ಪಣೆ ಮಾಡಿದ್ದಾರೆ.

ಇದೇ ಮಾದರಿಯನ್ನು ಅನುಸರಿಸಿ 2003-04 ಸಾಲಿನ ೭ನೇ ತರಗತಿಯ ವಿದ್ಯಾರ್ಥಿಗಳು ಅರ್ಧ ತೊಲೆ ಬಂಗಾರ, 10 ತೊಲೆ ಬೆಳ್ಳಿ ಸಮರ್ಪಣೆ ಮಾಡಿದ್ದಾರೆ. ಇನ್ನೂ 1999-2000 ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಲಾಕರ್ ನೀಡಿದ್ದಾರೆ. 2007-2008ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಟ್ರಿಜೂರಿ (ಅಲೆಮಾರಿ ) ನೀಡಿದ್ದಾರೆ ಎಂದರು.

ಟ್ರಸ್ಟ್ ಕಮೀಟಿ ಸದಸ್ಯ ಸುರೇಶ ಧಾರವಾಡ ಮಾತನಾಡಿ, ದೇವಿಯ ತವರುಮನೆಯಾಗಿರುವ ಭೋಗೆನಾಗರಕೊಪ್ಪ ಗ್ರಾಮಸ್ಥರು 50 ಸಾವಿರ ರೂ.ದೇಣಿಗೆ ಹಾಗೂ 10ಗ್ರಾಂ ಬಂಗಾರದ ಅಭರಣ ಸಮರ್ಪಣೆ ಮಾಡಿದ್ದಾರೆ ಎಂದರು.

ಸುತಗಟ್ಟಿ ಗ್ರಾಮಸ್ಥರು 10 ಗ್ರಾಂ ಬಂಗಾರದ ಆಭರಣ ಹಾಗೂ 6 ರೂ. ಲಕ್ಷ ದೇಣಿಗೆಯಾಗಿ ನೀಡಿದ್ದಾರೆ. ಇನ್ನೂ ಸೊಲಾರಗೊಪ್ಪ ಗ್ರಾಮಸ್ಥರು 50 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ. ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕಳೆದ 9 ದಿನಗಳಿಂದ ನಡೆದ ಜಾತ್ರೆ ಅತ್ಯಂತ ಯಶಸ್ವಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಮನಗೌಡ ಬಸನಗೌಡ ಪಾಟೀಲ, ಬಸವರಾಜ ಗಾಣಿಗೇರ, ಕುಬೇರಪ್ಪ ಕುಂದಗೋಳ, ಕಲ್ಲಪ್ಪ ಸವದತ್ತಿ, ನಾಗಪ್ಪ ಹಡಪದ, ಸುರೇಶ ಧಾರವಾಡ, ಮಂಜುನಾಥ ಮುತ್ತಣ್ಣವರ, ಬಸವರಾಜ ಯ ಗಾಣಿಗೇರ,ಸಂಗಯ್ಯ ಯಾದವಾಡ,ಅಶೋಕ ಬ ಧಾರವಾಡ,ಅಶೋಕ ಅರಳಿ,ಚನ್ನಪ್ಪ ಮೇಲಿನಮನಿ,ಬಸವರಾಜ ಅರಳಿಕಟ್ಟಿ,ಚನ್ನಬಸಪ್ಪ ಕೊಪ್ಪದ ಗಾಣಿಗೇರ, ಷಣ್ಮುಖ ಶಿಗೀಗಟ್ಟಿ, ಸೊಮಯ್ಯ ಚ ಕುರಡಿಕೇರಿ, ಗೂಳಪ್ಪ ಚ ಗೌರಮ್ಮನವರ,ಬಸಪ್ಪ ಹರಿಜನ, ಲಕ್ಷ್ಮಣ ಹರಿಜನ,ಚನ್ನಬಸಪ್ಪ ಕರಡಿ,ಚನ್ನವೀರಪ್ಪ ಹುಬ್ಬಳ್ಳಿ,ಸಿದ್ದಪ್ಪ ಹುಬ್ಬಳ್ಳಿ,ಶೇಖಪ್ಪ ಬಡಪ್ಪನವರ ಸೇರಿದಂತೆ ಮತ್ತಿತರರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!