Ad imageAd image

ಒಂದೇ ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ..!

Hubballi Dhwani
ಒಂದೇ ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ..!
WhatsApp Group Join Now
Telegram Group Join Now

ಒಂದೇ ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ..!

ಧಾರವಾಡ: ವಿಶ್ವದ ಅತ್ಯಂತ ದುಬಾರಿಯಾದ ಮಿಯಾಜಾಕಿ ಮಾವಿನ ಹಣ್ಣು ಧಾರವಾಡದ ಮಾವು‌ಮೇಳದಲ್ಲಿ ಗಮನ ಸೆಳೆಯಿತು. ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ.

ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ‌ ನಡೆದ ಮಾವು ಮೇಳದಲ್ಲಿ ಮಿಯಾಜಾಕಿ ಅತ್ಯಂತ ದುಬಾರಿ ದರಕ್ಕೆ ಮಾರಾಟ ಮಾಡಲು ಇಡಲಾಗಿತ್ತು.

ಕಲಕೇರಿ ಮಾವು ಬೆಳೆಗಾರ ಪ್ರಮೋದ ಗಾಂವಕರ ತೋಟದಲ್ಲಿ ಬೆಳೆದ ಮಾವು ಇದಾಗಿದ್ದು, ಮಾವು ಮೇಳದಲ್ಲಿ ಈ ತಳಿಯ ಮಾವನ್ನು ಇದೇ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಜನರು ಇಷ್ಟೊಂದು ದುಬಾರಿ‌ ಮಾವಿನ ಹಣ್ಣನ್ನು ಖರೀದಿಸದೇ ಕಣ್ತುಂಬಿಕೊಂಡರು.

ಮಾವಿನ ತಳಿಗಳಲ್ಲಿಯೇ ಅತೀ ದುಬಾರಿ ಈ ಮಿಯಾಜಾಕಿ ಮಾವಿನ ಹಣ್ಣು. ಜಪಾನ್ ಈ ತಳಿಯನ್ನು ಬೆಳೆಯುತ್ತಿದೆ. ಈ ಮಾವಿನ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7ಲಕ್ಷ ರೂ.ಗಳು ಆಗಿದ್ದು, ಮೇಳದಲ್ಲಿ ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ.

ಜಪಾನ ತಾಳಿಯಾದ ಮಿಯಜಾಕಿಯನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ತಂದಿರುವುದಾಗಿ ರೈತ ಪ್ರಮೋದ ಗಾಂವ್ಕರ್ ಅವರು ಹೇಳಿದ್ದಾರೆ.

ಸುಮಾರು 7 ಸಾವಿರಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದು ಅದರಲ್ಲಿ ಈ ಮಿಯಾಜಾಕಿ ಸೇರಿದಂತೆ ವಿವಿಧ ಮಾವಿನ ತಳಿಗಳನ್ನು ಬೆಳೆಯುತಿದ್ದೇನೆ ಎಂದು ತಿಳಿಸಿದ್ದಾರೆ.

ಮರವು ಸ್ಥಳೀಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಮರವು ಪ್ರತಿ ಋತುವಿಗೆ ಗರಿಷ್ಠ 14 ಹಣ್ಣುಗಳನ್ನು ನೀಡುತ್ತದೆ. ಇತ್ತೀಚೆಗೆ ಸುಮಾರು 2.5 ಲಕ್ಷ ರೂ.ಗೆ ಹತ್ತಾರು ಮಾವಿನ ಹಣ್ಣು ಮಾರಾಟವಾಗಿತ್ತು. ಅಪರೂಪದ ಹಣ್ಣಾಗಿರುವುದರಿಂದ ಆರೋಗ್ಯಕ್ಕೆ ಲಾಭದಾಯಕವಾಗಿರುವ ಕಾರಣ ಬೆಲೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!