ರಾಡ್ ಬಿದ್ದು ಪೊಲೀಸ್ ಸಾವು;
ಝಂಡು ಕಂಪನಿಯ 11 ಜನರ ಬಂಧನ
ಹುಬ್ಬಳ್ಳಿ: ಮೇಲ್ಲೇತುವೆ (ಫೈಓವರ್) ಕಾಮಗಾರಿ ನಿರ್ಲಕ್ಷ್ಯದಿಂದ ಉಪನಗರ ಠಾಣೆ ಎಎಸ್‌ಐ ನಾಭಿರಾಜ ಮೃತಪಟ್ಟ ಹಿನ್ನೆಲೆಯಲ್ಲಿ ಝಂಡು ಕನ್ಸ್‌ಟ್ರಕ್ಷನ್ ಕಂಪನಿಯ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎಎಸ್‌ಐ ನಾಭಿರಾಜ ದಯಣ್ಣವರ ಕರ್ತವ್ಯದ ನಿಮಿತ್ತ ತಮ್ಮ ಬೈಕ್‌ನಲ್ಲಿ ಹುಬ್ಬಳ್ಳಿ ಹಳೇ ಕೋರ್ಟ್ ಸರ್ಕಲ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಪ್ರೈಓವರ್ ಕಾಮಗಾರಿ ಮಾಡುತ್ತಿರುವ ಝಂಡು ಕನ್ಸ್‌ಟ್ರಕ್ಷನ್ ಕಂಪನಿಯ ನೌಕರರು ಯಾವುದೇ ಸುರಕ್ಷತಾ ಕ್ರಮ ಪಾಲಿಸಿರಲಿಲ್ಲ. ಹಾಗಾಗಿ, ಮೇಲ್ಲೇತುವೆ ಮೇಲಿಂದ ಕಬ್ಬಿಣದ ರಾಡ್ ಬಿದ್ದು ಎಎಸ್‌ಐ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆ ಕಂಪನಿಯ ನೌಕರರಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಪಾಲ ಶರ್ಮಾ, ಭೂಪೇಂದರ ಪಾಲ್, ಮೊಹಮ್ಮದ್ ಇಮಾದರೂ ಮಿಯಾ, ಅಸ್ಲಂ ಅಲಿ ಜಲೀಲಮಿಯಾ, ಮೊಹಮ್ಮದ್ ಮಸೂದರ ರೆಹಮಾನ್ ಹಾಜಿ, ಸಬೀಬ ಶೇಖ್ ಮನ್ಸೂರಾಲಿ, ರಿಜಾವುಲ್ ಹಕ್ ಮಂಜೂರಾಲಿ, ಶಮೀಮ ಶೇಖ್, ಮೊಹಮ್ಮದ್ ಆರೀಫ್, ಮೊಹಮ್ಮದ್ ರಬಿವುಲ್ ಹಕ್ ಎಂಬುವವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.