ನೂಲ್ವಿ ಪಿಕೆಪಿಎಸ್ ನೂತನ ಕಟ್ಟಡ ಲೋಕಾರ್ಪಣೆ
ಸಂಘಕ್ಕೆ 26.32 ಲಕ್ಷ ಲಾಭ
ಹುಬ್ಬಳ್ಳಿ; ತಾಲೂಕಿನ ನೂಲ್ವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟನೆ ಹಾಗೂ 2023-24 ನೇ ಸಾಲಿನ 68 ನೇ ವಾರ್ಷಿಕ ಮಹಾಸಭೆ ಯಶಸ್ವಿಯಾಗಿನಡೆಯಿತು.
ಸಂಘದ ಸದಸ್ಯರು ಹಾಗೂ ಮಾಜಿ ಸಚಿವರಾದ ಪರ್ವತಗೌಡ ಚ ಸಿದ್ದನಗೌಡ್ರ ಅವರು ಮಾತನಾಡಿ, ಸಂಘದ ಸದಸ್ಯರ ಸಹಕಾರ,ಆಡಳಿತ ಮಂಡಳಿ ನಿರ್ದೇಶಕರ ಪ್ರೋತ್ಸಾಹ, ಹಾಗೂ ಸಿಬ್ಬಂದಿ ವರ್ಗದವರ ಶ್ರದ್ದೆ, ನಿರಂತರ ಶ್ರಮ ಒಂದು ಸಂಘ ಸಂಸ್ಥೆಗಳು ಏಳಿಗೆ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ ಹಾಗೆಯೇ ರೈತರಿಗೆ ಅನುಕೂಲವಾಗುವ ಮತ್ತು ರೈತರ ಆರ್ಥಿಕವಾಗಿ ಸದೃಢರಾಗಲು ಇನ್ನು ಹಲವು ಸಾಮಾಜಿಕ ಕಾರ್ಯಗಳನ್ನು ನಿಮ್ಮ ಸಂಘದಿಂದ ಆಗಲಿ ಎಂದು ಶುಭ ಹಾರೈಸಿದರು.
ಹಿರೇಮಠ ಗುರುಗಳು ಮಾತನಾಡಿ, ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಜೊತೆಗೆ ಲಾಭದ ಪ್ರಮಾಣವನ್ನು ವೃದ್ಧಿಸುತ್ತ ಬಂದಿರುತ್ತದೆ ಇದರ ಜೊತೆಗೆ ನಮ್ಮ ರೈತರಿಗೆ ಒಂದು ಸೂರಿನದಡಿಯಲ್ಲಿ ಎಲ್ಲಾ ವಸ್ತುಗಳು ಸಿಗುವಂತಾಗಲಿ ಎಂದು ಮತ್ತು ನೂತನ ಕಟ್ಟಡದ ಬಗ್ಗೆ ಪ್ರಸುಶಯ ಮಾತುಗಳನ್ನು ವ್ಯಕ್ತಪಡಿಸಿದರು.
ಸಂಘದ ಸದಸ್ಯರಾದ ಡಿ. ಎಸ್ ಸಿದ್ದನಗೌಡ್ರ ಮಾತನಾಡಿ, ಇದು ಕೃಷಿ ಸಹಕಾರ ಸಂಘವಾಗಿರುವುದರಿಂದ ರೈತರನ್ನು ಆದರಿಸುವುದು, ಅವರ ಆರ್ಥಿಕವಾಗಿ ಸಬಲವಾಗಿಸುವುದು ಮತ್ತು ವರ್ಷಕ್ಕೆ ಒಂದು ಬಾರಿಯಾದರು ಉತ್ತಮ ಪ್ರಗತಿ ಪರ ರೈತರನ್ನು ಗುರುತಿಸಿ ಅವರನ್ನು ಬೆನ್ನು ತಟ್ಟಿ ಪ್ರೋತಾಹಿಸುವುದು ಆಗಲಿ ಎಂದು ಹಿತನುಡಿಯನ್ನು ನೀಡಿದರು.
ಸಂಘದ ಅಧ್ಯಕ್ಷರಾದ ಮುತ್ತನಗೌಡ ರು ಪಾಟೀಲ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಲಾಭವನ್ನು ಹೊಂದಿದ್ದು ಈ ಸಲವು ಸಂಘದ ಸದಸ್ಯರಿಗೆ 8% ಡಿವಿಡೆಂಡ ನೀಡಲು ಘೋಷಣೆ ಮಾಡಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕರಾದ ಕಲ್ಲನಗೌಡ ಕಂ ಮುಗನ್ನವರ ಮಾತನಾಡಿ, 2023-24 ನೇ ಸಾಲಿನಲ್ಲಿ ಸಂಘವು 26.32 ಲಕ್ಷಗಳ ಲಾಭವನ್ನು ಹೊಂದಿದೆ. 80 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಘದ ನೂತನ ಕಟ್ಟಡದಲ್ಲಿ ಪ್ರತಿಯೊಂದು ಕುಟುಂಬಕ್ಕೆ ಬೇಕಾಗುವ ದಿನನಿತ್ಯದ ದಿನಸಿ ವಸ್ತುಗಳ ಹಳ್ಳಿ ಶೈಲಿಯ ಆಧುನಿಕ ರೀತಿಯ ಒಂದು ಸೂಪರ್ ಮಾರ್ಕೆಟ್ ಮಾಡುವುದು ಇದರಿಂದ ಒಂದು ಸೂರಿನಡಿಯಲ್ಲಿ ಎಲ್ಲಾ ವಸ್ತುಗಳು ಸಿಗುವುದು ಜೊತೆಗೆ ಉದ್ಯೋಗ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಸಂಘದ ಎಲ್ಲಾ ಸದಸ್ಯರು ಸಂಘದಲ್ಲಿ ವ್ಯವಹಾರ ಮಾಡುವುದರಿಂದ ಇನ್ನು ಹಲವು ಪ್ರಗತಿಪರ್ ಯೋಜನೆಗಳನ್ನು ನೀಡಬಹುದು, ಕೇಂದ್ರ ಸರಕಾರ ಸಂಘಗಳನ್ನು ಡಿಜಿಟಲಕರಣ ನಮ್ಮ ಸಂಘವು ಮುಕ್ತಾಯ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಈ ಆನ್ಲೈನ್ ಸೇವೆಯೂ ನಿಮಗೂ ದೊರೆಯಲಿದ್ದು ಸದಸ್ಯರು ಸಹಕಾರ ನೀಡಬೇಕಾಗಿ ಇದೇ ಸಮಯದಲ್ಲಿ ತಿಳಿಸಿದರು.
2023-24 ಸಾಲಿನಲ್ಲಿ ಪಾಸಾದ 8 ಶಾಲೆಯ 7ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣಪತ್ರ, ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷರಾದ ಮುತ್ತನಗೌಡ ರು ಪಾಟೀಲ್ ಉಪಾಧ್ಯಕ್ಷರಾದ ಗದಿಗೆಪ್ಪ ಸಿ ಜಿಡ್ಡಿ ನಿರ್ದೇಶಕರಾದ ಬಸನಗೌಡ ಶಂ ಸಿದ್ದನಗೌಡ್ರ, ಈರನಗೌಡ ನಿಂ ಮುಗನ್ನವರ, ಗುರುನಗೌಡ ಗು ಧರ್ಮಗೌಡ್ರ, ದ್ಯಾಮನಗೌಡ ಚಂ ಬಾಳಪ್ಪಗೌಡ್ರ, ಬಾಬುರಾವ್ ದೌ ಮೊಖಾಶಿ, ಗುರುಸಿದ್ದಪ್ಪ ನಿಂ ಕೊಪ್ಪದ, ಈರವ್ವ ನಾ ಹುತ್ತನಗೌಡ್ರ, ರುದ್ರವ್ವ ಫ್ ಗಣಾಚಾರಿ, ಗುರುನಾಥಗೌಡ ಪ ಧರ್ಮಗೌಡ್ರ ಮತ್ತು ಶಂಕ್ರಪ್ಪ ಗೌ ಭಂಗಿ ಅವರು ಉಪಸ್ಥಿತರಿದ್ದರು.