32.12 ಲಕ್ಷ ರೈತರಿಗೆ ಬರ ಪರಿಹಾರ ಜಮಾ
ನಿಮಗೆ ಹಣ ಬಂತಾ? ಚೆಕ್ ಮಾಡಿ
ಬರದಿಂದ ರಾಜ್ಯಾದ್ಯಂತ ರೈತರು ತತ್ತರಿಸಿದ್ದು, ಇನ್ನೂ ಚೇತರಿಸಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶದ ಮೇರೆಗೆ ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಆ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ.
ರಾಜ್ಯ ಸರಕಾರವು ಈಗಾಗಲೇ ಒಟ್ಟು 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನ ಬರ ಪರಿಹಾರವನ್ನು ನೀಡಿದ್ದು: ಇದೀಗ ಕೇಂದ್ರದಿಂದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತತ ಹಾಕಲಾಗುತ್ತಿದೆ. ಈಗ ಕೇಂದ್ರದಿಂದ ಬಂದಿರುವ ಸಂಪೂರ್ಣ ಹಣವನ್ನು ರೈತರಿಗೆ ಕೊಡಲಾಗುತ್ತಿದೆ.
223 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಿದ್ದು: ಇದರಲ್ಲಿ 196 ತಾಲ್ಲೂಕುಗಳು ತೀವ್ರ ಬರ ಎದುರಿಸುತ್ತಿವೆ. ಒಟ್ಟಾರೆ ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಿನ ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರವನ್ನು ‘ರಾಷ್ಟ್ರೀಯ ವಿಪತ್ತು ಪರಿಹಾರ (National Disaster Relief Fund – NDRF) ಒಟ್ಟು 18,172 ಕೋಟಿ ರೂ. ಪರಿಹಾರ ಕೇಳಿತ್ತು ಈ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರವು 3,454 ಕೋಟಿ ರೂಪಾಯಿ ಪರಿಹಾರ ಮಾತ್ರ ವಿತರಣೆ ಮಾಡಿದೆ. ಅಂದರೆ, ಕೇಳಿದ್ದರಲ್ಲಿ ಶೇ.19ರಷ್ಟು ಹಣವನ್ನು ಮಾತ್ರ ಕೊಟ್ಟಿದೆ.
32.12 ಲಕ್ಷ ರೈತರಿಗೆ ಹಣ ಜಮಾ ಕಳೆದ ಮೇ 6ರಿಂದ ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರ ಹಣ ಜಮಾ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಕಂತುಗಳಿಂದ ಇದುವರೆಗೆ 3,000 ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ (DBT) ಮೂಲಕ ಫಲಾನುಭವಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಇದುವರೆಗೆ 32.12 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದಾಗಿ ಸುಮಾರು 15 ಲಕ್ಷ ರೈತರ ಖಾತೆಗಳಿಗೆ 2ನೇ ಕಂತಿನ ಪರಿಹಾರದ ಹಣ ಜಮೆ ಆಗಿಲ್ಲ ಶೀಘ್ರದಲ್ಲಿ ಈ ರೈತರಿಗೂ ಹಣ ಸಂದಾಯವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದ್ದಾರೆ.
ಈಗಾಗಲೇ ಬಹುತೇಕ ರೈತರಿಗೆ ಬರ ಪರಿಹಾರ ಮನ ಅದ ಬಗ್ಗೆ ರೈತರು ಹೊಂದಿರುವ ಬ್ಯಾಂಕ್ನಿಂದ ನೇರವಾಗಿ ಮೊಬೈಲ್ SMS ಬಂದಿರುತ್ತದೆ. ಒಂದು ವೇಳೆ SMS ಬಾರದೇ ಇದ್ದರೆ ರಾಜ್ಯ ಸರಕಾರದ ‘ಪರಿಹಾರ ಹಣ ಸಂದಾಯ ವರದಿ’ ತಂತ್ರಾಂಶದ ಮೂಲಕ ಫಲಾನುಭವಿ ರೈತರು ತಮಗೆ ಸಂದಾಯವಾಗಿರುವ ಪರಿಹಾರ ಹಣದ ವಿವರ ತಿಳಿಯಬಹುದಾಗಿದೆ.
ನಾವು ಕೆಳಗೆ ನೀಡಿರುವ ಪರಿಹಾರ ಹಣ ಸಂದಾಯ ವರದಿ ತಂತ್ರಾಂಶದ ಲಿಂಕ್ ಬಳಸಿ ರೈತರು ತಮ್ಮ ಆಧಾರ್ ನಂಬರ್ ನಮೂದಿಸಿ, ವರ್ಷ, ಋತು ಸೆಲೆಕ್ಸ್ ಮಾಡಿ ಕ್ಯಾಪ್ಟಾ ನಮೂದು ಮಾಡಿ ಸಬ್ಮಿಟ್ ಒತ್ತಿದರೆ ನಿಮಗೆ ಹಣ ಜಮಾ ವಿವರ ತಿಳಿಯಲಿದೆ.
ಬರ ಪರಿಹಾರ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಇನ್ನೊಂದು ವಿಧದಲ್ಲಿ ನಾವು ಕೆಳಗೆ ನೀಡಿರುವ DBT Karnataka ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಆಧಾರಿತ OTP ಮೂಲಕ 2 th wate ನಮೂದಿಸಿ ಬರ ಪರಿಹಾರ ಜಮಾ ವಿವರವನ್ನು ಪರಿಶೀಲಿಸಬಹುದಾಗಿದೆ.
DBT Karnataka ಲಿಂಕ್ ಡೌನಲೋಡ್ ಮಾಡಿಕೊಳ್ಳಿ