ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿದೆ.
20 ವರ್ಷದ ಅಂಜಲಿ ಅಂಬಿಗೇರ ಹತ್ಯೆ, ವಿಶೇಷ ಪ್ರಕರಣ ವೆಂದು ಭಾವಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರ ಕುಟುಂಬಕ್ಕೆ ನೆರವು ಘೋಷಿಸುವಂತೆ, ಗೃಹ ಸಚಿವರಾದ ಡಾ ಜಿ ಪರಮೇಶ್ವರ, ಹಾಗೂ ಸ್ಥಳೀಯ ಉತ್ಸುವಾರಿ ಸಚಿವರು, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಸಂಘ ಸಂಘಟನೆಗಳು, ಮುಖ್ಯಮಂತ್ರಿಗಳಿಗೆ ಕೋರಿದ್ದರು.
ಪ್ರಕರಣದ ಗಂಭೀರ್ಯತೆ ಮತ್ತು ವರದಿಯನ್ನು ಕೂಲಂಕುಶವಾಗಿ ಆಧರಿಸಿ ಮುಖ್ಯಮಂತ್ರಿಗಳು,
ಹುಬ್ಬಳ್ಳಿ ಧಾರವಾಡ ಜಿಲ್ಲಾಧಿಕಾರಿಗಳ ಇವರ ಖಾತೆಗೆ 5 ಲಕ್ಷ ರೂಪಾಯಿ ಹಣವನ್ನು ನೇರವಾಗಿ ಆರ್ ಟಿ ಜಿ ಎಸ್ ಮುಖಾಂತರ ವರ್ಗಾಯಿಸಿ, ಪರಿಹಾರ ಹಣವನ್ನು ಮಂಜೂರು ಮಾಡಿದ್ದಾರೆ,
ಮೃತ್ತರ ನೈಜ ವಾರಸುದಾರರಿಗೆ ಕಾನೂನು ಬದ್ದವಾಗಿ ಹಣವನ್ನು ತಲುಪಿಸುವಂತೆ, ಹಾಗೂ ವಾರಸುದಾರರು ಹಣ ಪಡೆದ ಬಗ್ಗೆ ಸ್ವೀಕೃತಿ ಪತ್ರವನ್ನು ಸರ್ಕಾರದ ಕಚೇರಿಗೆ ತಲುಪಿಸುವಂತೆ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳು ಇವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ವರದಿ ಲೋಹಿತ ಬಸವಾ