ಹುಬ್ಬಳ್ಳಿ: ಒಣ ಮೆಣಸಿನಕಾಯಿ ಖರೀದಿಸಿ ವಂಚಿಸಿರುವ ಮೂವರ ವಿರುದ್ಧ ಇಲ್ಲಿನ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪಿಎಂಸಿ ಆವರಣದಲ್ಲಿ ಒಣ ಮೆಣಸಿನಕಾಯಿ ಮಾರಾಟಗಾರರಿಂದ ₹86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ, ₹32.81 ಲಕ್ಷ ನೀಡಿ, ಉಳಿದ ಹಣ (₹54 ಲಕ್ಷ) ನೀಡದೆ ವಂಚಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ.
ಮಹಾರಾಷ್ಟ್ರ ಮೂಲದ ಅಸಮಕ್ಕುಲಾಲ, ಅಕಿಂತಾ ಮತ್ತು ಧಾವಲ್ ವಿರುದ್ಧ, ಶಂಭುಲಿಂಗೇಶ್ವರ ಟ್ರೇಡರ್ಸ್ ಮಾಲೀಕ ಶಂಭುಲಿಂಗಪ್ಪ ಅಂಗಡಿ ದೂರು ನೀಡಿದ್ದಾರೆ.
ಫೆ. 24ರಂದು ₹86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ, ಜೂನ್ 30ರವರೆಗೆ ₹32 ಲಕ್ಷ ಮರಳಿಸಿದ್ದರು. ಬಾಕಿ ಹಣ ಕೇಳಿದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.