ಬಿಎಸ್ಎನ್ಎಲ್ ತನ್ನ ೫ಜಿ ಸೇವೆಯನ್ನು ಜನವರಿ ೨೦೨೫ರಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಬಿಎಸ್ಎನ್ಎಲ್ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸಾಧ್ಯವಾದಷ್ಟು ಬೇಗ ೫ಜಿ ರೋಲ್ಔಟ್ಗೆ ಅನುಕೂಲವಾಗುವಂತೆ ತನ್ನ ಮೂಲಸೌಕರ್ಯವನ್ನು ಅಪ್ಡೇಟ್ ಮಾಡಲು ಕಂಪನಿ ಒತ್ತು ನೀಡುತ್ತಿದೆ. ಇದು ಟವರ್ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಅನ್ ಲಿಮಿಟೆಡ್ ಕರೆ, ಉಚಿತ ಡೇಟಾ, ೫೨ ದಿನ ವ್ಯಾಲಿಡಿಟಿ:
ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ೨೯೮ ರೂ. ವಿಶೇಷ ರೀಚಾರ್ಜ್ ಯೋಜನೆ ನೀಡಿದೆ. ಬನ್ನಿ, ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಅಗ್ಗದ ರೀಚಾರ್ಜ್ ಪ್ಲಾನ್ : ಜುಲೈ ತಿಂಗಳಿನಿಂದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ರೀಚಾರ್ಜ್ ಯೋಜನೆಗಳ ಬೆಲೆಗಳು ಸುಮಾರು ಶೇ ೨೫ರಷ್ಟು ಏರಿಕೆಯಾದ ನಂತರ, ಜನರು ಈಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ನ ಯೋಜನೆಗಳಿಗೆ ಎಡತಾಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ೧ಜಿಬಿ ದೈನಂದಿನ ಡೇಟಾದೊಂದಿಗೆ ಅಗ್ಗದ ಯೋಜನೆಯೊಂದನ್ನು ಇದೀಗ ಹೊರತಂದಿದೆ.
ಜಿಯೋಗೆ ಹೋಲಿಸಿದರೆ ಈ ಯೋಜನೆಗಳು ಅರ್ಧದಷ್ಟು ಬೆಲೆಗೆ ಸಿಗುತ್ತವೆ. ಜಿಯೋಗೆ ಸಮಾನ ಮಾನ್ಯತೆ ಮತ್ತು ಕರೆಗಳನ್ನೂ ಒದಗಿಸುತ್ತವೆ. ಅಂದಹಾಗೆ ಇದು ೨೯೮ ರೂ ರೀಚಾರ್ಜ್ ಯೋಜನೆ. ಇದರ ಸಿಂಧುತ್ವವು ಪೂರ್ಣ ೨ ತಿಂಗಳವರೆಗೆ ಲಭ್ಯವಿಲ್ಲ. ಆದರೆ ೨ ತಿಂಗಳ ರೀಚಾರ್ಜ್ ಯೋಜನೆಗೆ ಅಗ್ಗದ ಆಯ್ಕೆ ಎನ್ನಬಹುದು.