ಹುಬ್ಬಳ್ಳಿ: ಇಲ್ಲಿನ ನವನಗರದ ಲಕ್ಷ್ಮಿ ಖಾನಾವಳಿಯ ಅಡುಗೆ ಮನೆಯಲ್ಲಿ ಹೊತ್ತಿಕೊಂಡ ಬೆಂಕಿ ನಂದಿಸಲು ಹೋದ ನಾಲ್ವರು ಪೊಲೀಸರಿಗೆ, ಏಕಾಏಕಿ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ.
ನವನಗರದ ಪೊಲೀಸ್ ಠಾಣೆಯ ಸಿಬ್ಬಂದಿ ವಿಕ್ರಮ್ ಪಾಟೀಲ, ರಾಮದುರ್ಗ, ಸನ್ನಿ ಮತ್ತು ಮಂಜು ಗಾಯಗೊಂಡವರು.
ಖಾನಾವಳಿಯ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಲು ಪೊಲೀಸರು ಒಳಗಡೆ ಹೋಗುತ್ತಿದ್ದಂತೆಯೇ ಅಡುಗೆ ಮನೆಯಲ್ಲಿದ್ದ ಕುಕ್ಕರ್ ಸ್ಫೋಟವಾಗಿದೆ. ಅದರ ಜೊತೆ, ಗ್ಯಾಸ್ ಸಿಲಿಂಡರ್ ಸಹ ಸ್ಫೋಟಗೊಂಡಿದೆ. ಪ್ರಾಣಾಪಾಯದಿಂದ ಪೊಲೀಸರು ಪಾರಾಗಿದ್ದಾರೆ.