ಹುಬ್ಬಳ್ಳಿ: ಬರ್ಬರವಾಗಿ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮೇ 4 ರಂದು ಶನಿವಾರ ಭೇಟಿ ನೀಡಲಿದ್ದಾರೆ.
ನಿರಂಜನ ಹಿರೇಮಠ ಕುಟುಂಬ ಅಮಿತಾ ಶಾ ಭೇಟಿ ಬೆನ್ನಲ್ಲೇ
ಡಿಕೆಶಿ ಆಗಮಿಸುತ್ತಿರುವುದು ಹಲವು ಮಹತ್ವವನ್ನು ಹೊಂದಿದ್ದು, ಇತ್ತೀಚೆಗೆ ನಡೆದ ಘಟನೆಗಳ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ವಿಮಾನ ನಿಲ್ದಾಣದಲ್ಲಿ ನಿರಂಜನ ಹಿರೇಮಠ ಕುಟುಂಬವನ್ನು ಭೇಟಿ ಮಾಡಿದ್ದರು. ತದನಂತರ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಮಠ ಕುಟುಂಬವನ್ನು ಕರೆಸಿ ಮಾತನಾಡಿದ್ದರು.