Ad imageAd image

ಕಾಂಗ್ರೆಸ್, ಬಿಜೆಪಿಯಿಂದ ಆಮಿಷ; ನಾಯಕವಾಡಿ

Hubballi Dhwani
ಕಾಂಗ್ರೆಸ್, ಬಿಜೆಪಿಯಿಂದ ಆಮಿಷ; ನಾಯಕವಾಡಿ
WhatsApp Group Join Now
Telegram Group Join Now

ಈ ಬಾರಿ ನನ್ನ ಗೆಲುವು ಖಚಿತ: ರಾಜು ನಾಯಕವಾಡಿ

ಧಾರವಾಡ ;ಲೋಕಸಭಾ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಭಾರತೀಯ ಜನತಾ ಪಕ್ಷ , ಕಾಂಗ್ರೆಸ್ ಪಕ್ಷದ ಮುಖಂಡರು ಒತ್ತಾಯ ಮಾಡುವ ಜೊತೆಗೆ ಆಮಿಷ ನೀಡಿದ್ದಾರೆ. ಇದಲ್ಲದೇ ನಮ್ಮ ಎಸ್ ಎಸ್ ಕೆ ಸಮಾಜದ ಮುಖಂಡರು ಸಹ ಒತ್ತಡ ಹೇರಿದ್ದರು ಎಂದು ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಾಲ್ಕು ಬಾರಿ ಆಯ್ಕೆ ಆಗಿ ಏನು ಮಾಡಿದ್ದಾರೆ. ೮೨ ವಿಭಾಗಗಳಲ್ಲಿ ರಸ್ತೆ ಗಟರು ಇಲ್ಲ. ನೀರು ಸಿಗುತ್ತಿಲ್ಲ. ಅವಳಿ ನಗರದ ಜನತೆಯನ್ನು ಸಂಪರ್ಕಿಸಿಲ್ಲ. ಒಂದು ದಿನವೂ ವಾರ್ಡ್‌ಗಳಿಗೆ ಭೇಟಿ ನೀಡಿಲ್ಲ. ಈ ಬಾರಿ ನನ್ನ ಆಯ್ಕೆ ಖಚಿತ ಎಂದು ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ವಿವಿಧ ಜನಪರ ಕಾರ್ಯ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯ ಬಡ ಜನರಿಗೆ ದೊರಕಿಸಿ ಕೊಡುವ ಜೊತೆಗೆ ಜನ ಪರ ಕಾರ್ಯ ಮಾಡುತ್ತಿದ್ದೇನೆ ಎಂದರು.
ರೈತ ಚೈತನ್ಯ, ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೇಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ , ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ, ಯುವ ಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ವಸತಿಯ ಆಸರೆ – ವಸತಿ ಇಲ್ಲದವರಿಗೆ ಸರಕಾರದಿಂದಲೇ ವಸತಿ ಕಟ್ಟಿಸಿಕೊಡುವ ಯೋಜನೆ.ಸಾರ್ವಜನಿಕ ಜನತೆಗೆ ಸೌಕರ್ಯ ಪ್ರತಿಯೊಂದು ವಾರ್ಡಗೆ ಗಾರ್ಡನ, ಗ್ರಂಥಾಲಯ ಹಾಗೂ ಸುಲಭ ಶೌಚಾಲಯ ಪ್ರತಿಯೊಂದು ಅಟೋ ಚಾಲಕನಿಗೆ ಸರ್ಕಾರದಿಂದ ಗೌರವ ಧನ ೫೦೦೦ ರೂಪಾಯಿ. ಕುಲಿ ಕಾರ್ಮಿಕರಿಗೆ ಗೌರವ ಧನ ೫೦೦೦ ರೂಪಾಯಿ ಸಿನಿಯರ್ ಸಿಟಿಜನ್ ಹಾಗೂ ವಿಧವೆಯರಿಗೆ ಮಾಸಾಶನ ಸರ್ಕಾರದಿಂದ ಹೆಚ್ಚಿಗೆ ಮಾಡಲಾಗುವುದು ಎಂದರು.
ನನ್ನ ಚಿಹ್ನೆ ತಳ್ಳುವ ಗಾಡಿ. ನಂಬರ್ ೧೫ ನಂಬರಿಗೆ ತಮ್ಮ ಅಮೂಲ್ಯವಾದ ಮತವನ್ನು ಒತ್ತಿ ನನಗೆ ಆಶೀರ್ವಾದ ಮಾಡುವ ಜೊತೆ ಆರಿಸಿ ತರಬೇಕೆಂದು ವಿನಂತಿಸಿಕೊಂಡರು. ಈ ಬಾರಿ ನನ್ನ ಆಯ್ಕೆ ಖಚಿತ ಎಂದು ಹೇಳಿದರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ನನಗೆ ಸಂಪೂರ್ಣ ಬೆಂಬಲ ನೀಡಿವೆ ಎಂದು ಹೇಳಿದರು. ಈ ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಮಲಗತ್ತಿ, ಆನಂದ್ ದಲಭಂಜನ್, ಗೋಪಾಲ್ ಧಾರವಾಡ ಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!