ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.74.35 ರಷ್ಟು ಮತದಾನ
ಧಾರವಾಡ; ಸಾರ್ವತ್ರಿಕ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ರಾತ್ರಿ 9 ಗಂಟೆಯವರಗೆ ದೊರೆತ ಅಧಿಕೃತ ಮಾಹಿತಿಗಳ ಪ್ರಕಾರ ಅಂತಿಮವಾಗಿ ಶೇ. 74.35 ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಗೆ ಎಲ್ಲಾ 1893 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ 9 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.9.38 ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ 24 ರಷ್ಟು ಮತದಾನ ಆಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40.61 ರಷ್ಟು ಮತದಾನ ದಾಖಲಾಗಿತ್ತು.. ಮಧ್ಯಾಹ್ನ 3 ಗಂಟೆಗೆ ಶೇ. 55 ರಷ್ಟು ಮತ ಚಲಾವಣೆಗೊಂಡಿತು. ಸಂಜೆ 5 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.67.15 ಮತದಾನವಾಗಿತ್ತು.
ರಾತ್ರಿ 9 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 74.35 ಮತದಾನವಾಗಿದೆ.
ನವಲಗುಂದ ಕ್ಷೇತ್ರದಲ್ಲಿ ಶೇ. 76.92 ರಷ್ಟು ಮತದಾನವಾಗಿದೆ.
ಕುಂದಗೋಳ ಕ್ಷೇತ್ರದಲ್ಲಿ ಶೇ. 80 ರಷ್ಟು ಮತದಾನವಾಗಿದೆ.
ಧಾರವಾಡ ಕ್ಷೇತ್ರದಲ್ಲಿ ಶೇ. 75.83 ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಪೂರ್ವ) ಕ್ಷೇತ್ರದಲ್ಲಿ ಶೇ. 73.48 ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಸೆಂಟ್ರಲ್) ಕ್ಷೇತ್ರದಲ್ಲಿ ಶೇ. 66.85ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ ಶೇ. 67.16ರಷ್ಟು ಮತದಾನವಾಗಿದೆ.
ಕಲಘಟಗಿ ಕ್ಷೇತ್ರದಲ್ಲಿ ಶೇ. 82.26 ರಷ್ಟು ಮತದಾನವಾಗಿದೆ.
ಶಿಗ್ಗಾಂವ ಕ್ಷೇತ್ರದಲ್ಲಿ ಶೇ. 77.24 ರಷ್ಟು ಮತದಾನವಾಗಿದೆ.