Ad imageAd image

ನೇಹಾ, ಅಂಜಲಿ ಸಾವಿಗೆ ಸಿಗುವುದೇ ನ್ಯಾಯ?

Hubballi Dhwani
ನೇಹಾ, ಅಂಜಲಿ ಸಾವಿಗೆ ಸಿಗುವುದೇ ನ್ಯಾಯ?
WhatsApp Group Join Now
Telegram Group Join Now

ನೇಹಾ, ಅಂಜಲಿ ಸಾವಿಗೆ ಸಿಗುವುದೇ ನ್ಯಾಯ?

ಪ್ರೀತಿ ನಿರಾಕರಣೆಯ ಹಿನ್ನೆಯಲ್ಲಿ ಕೊಲೆಯಾದ ನೇಹಾ ಹಾಗೂ ಅಂಜಲಿ ಸಾವಿಗೆ ನ್ಯಾಯ ಒದಗಿಸಲು ಇಡೀ ರಾಜ್ಯವೇ ಒಕ್ಕೂರಿಲಿನಿಂದ ಆಗ್ರಹಿಸುತ್ತಿದೆ. ಮಗ್ದ ಹೆಣ್ಣು ಮಕ್ಕಳನ್ನು ಹತ್ಯೆಗೈದ ಇಬ್ಬರು ಆರೋಪಿಗಳನ್ನು ಎನ್‌ ಕೌಂಟರ್‌ ಮಾಡಲು ಒತ್ತಾಯಿಸುತ್ತಿದ್ದಾರೆ. ಯಾವ ಹೆಣ್ಣು ಮಕ್ಕಳಿಗೂ ಇಂತಹ ಸ್ಥಿತಿ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬಾಳಿ ಬೆಳಕಾಗಬೇಕಾದ ಎರಡು ಹೆಣ್ಣು ಮಕ್ಕಳ ಜೀವ ಚೂರಿ ಅಂಚಿನಲ್ಲಿ ಕೊನೆಯಾಗಿರುವುದು ಅವಳಿನಗರದ ಜನತೆಯನ್ನು ದುಃಖಕ್ಕೆ ದೂಡಿದೆ.

ಸರ್ಕಾರಕ್ಕೆ ಕೇಳಿಸದೆ ಕೂಗು:
ಅಂದು ಬಿವಿಬಿ ಕಾಲೇಜ್‌ನಲ್ಲಿ ನೇಹಾ ನಿರಂಜನ ಹಿರೇಮಠ ಹತ್ಯೆಯಾದ ಸಂದರ್ಭದಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ, ಇನ್ನೊಂದು ಹೆಣ್ಣು ಮಗುವಿನ ಜೀವನ ಬಾಡುತ್ತಿರಲಿಲ್ಲ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗುತ್ತಿದೆ. ಅವಳಿನಗರದ ಪೊಲೀಸ್‌ ಇಲಾಖೆ ನಗರದ ಜನತೆಯ ಭದ್ರತೆ ದೃಷ್ಟಿಯಿಂದ ಹೆಚ್ಚುವರಿ ಕ್ರಮ ಕೈಗೊಳ್ಳಬೇಕಿತ್ತು. ಬೀಟ್‌ ಪೊಲೀಸ್‌ ವ್ಯವಸ್ಥೆ ಮತ್ತಷ್ಟು ಸದೃಢಗೊಳಿಸುವುದರ ಜೊತೆಗೆ ಕ್ರಿಮಿನಲ್‌ ಹಿನ್ನಲೆಯುಳ್ಳವರ ಚಲನವಲನಗಳ ಮೇಲೆ ನಿಗಾವಹಿಸುವ ಅವಶ್ಯಕತೆಯೂ ಇತ್ತು. ಈ ಯಾವ ಕ್ರಮ ಕೈಗೊಳ್ಳದೆ ಕೈ ಚೆಲ್ಲಿದ ಪರಿಣಾಮ ಮತ್ತೊಂದು ಅಮಾಯಕಿಯ ಜೀವ ಅರಳುವ ಮುನ್ನವೇ ಮುದುಡಿತು ಎಂಬ ಮಾತು ಅವಳಿನಗರದ ಜನತೆಯಿಂದ ವ್ಯಕ್ತವಾಗುತ್ತಿದೆ. ರಾಷ್ಟ್ರವನ್ನೇ ಬೆಚ್ಚಿ ಬಿಳಿಸುವಂತಹ ಘಟನೆ ನಡೆದರೂ ರಾಜ್ಯದ ಗೃಹ ಸಚಿವರು ಹುಬ್ಬಳ್ಳಿಗೆ ಆಗಮಿಸದಿರುವುದು ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಾಗುವ ಅನಾಹುತ ತಪ್ಪಿಸುವ ಅವಕಾಶವನ್ನು ಮರೆತ ಸರ್ಕಾರಕ್ಕೆ ರಾಜ್ಯದ ಜನತೆ ಛೀ ಮಾರಿ ಹಾಕುತ್ತಿದ್ದಾರೆ.

ಸಿಗುವುದೇ ನ್ಯಾಯ:

ಎಬಿವಿಪಿ ಹಾಗೂ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿವೆ. ಎರಡು ಪ್ರಕರಣಗಳಲ್ಲಿ ಜಯ ಕರ್ನಾಟಕ ಸಂಘಟನೆ, ಕರವೇ ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ತಮ್ಮ ಮನೆಯ ಹೆಣ್ಣು ಮಕ್ಕಳ ಹತ್ಯೆಯಾಗಿದೆ ಎಂಬ ಭಾವದಲ್ಲಿಯೇ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ನೇಹಾಳ ಪ್ರಕರಣ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಬೇಕು. ಇನ್ನೂಳಿದ ಆರೋಪಿಗಳ ಬಂಧಿಸಬೇಕು ಎಂಬ ತಂದೆ ನಿರಂಜನ ಹಿರೇಮಠ ಅವರ ಹಳಿಕೆಯಲ್ಲಿಯೇ ತನಿಖೆಯ ಬಗ್ಗೆ ಒಂದಿಷ್ಟು ಅನುಮಾನಗಳು ಎಲ್ಲರಲ್ಲೂ ಕಾಡುತ್ತಿವೆ. ಆಡಳಿತರೂಢ ಪಕ್ಷದ ಪಾಲಿಕೆ ಸದಸ್ಯರಾಗಿದ್ದರೂ ಕೂಡ ನಿಸ್ಸಾಹಕರಾಗಿ ನಿಂತಿರುವುದು ಬಹು ಆಶ್ಚರ್ಯದ ಸಂಗತಿ. ಇನ್ನೂ ಅಂಜಲಿ ಕುಟುಂಬಸ್ಥರು ಅವರಿವರ ಮನೆಯ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಡ ಜೀವಿಗಳು. ಈ ಕುಟುಂಬಕ್ಕೆ ನ್ಯಾಯ ಗಗನಕುಸುಮವಾಗದಿರಲಿ. ಸರ್ಕಾರ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸುವ ಅವಶ್ಯಕತೆಯಿದೆ ಎಂದು ರಾಜ್ಯದ ಜನತೆ ಒಕ್ಕೂರಲಿನಿಂದ ಆಗ್ರಹಿಸುತ್ತಿದ್ದಾರೆ.

ಬನ್ನಿ ಸಚಿವರೇ:
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ದೊಡ್ಡ ಘಟನೆ ನಡೆದರೂ ಈವರೆಗೂ ಹುಬ್ಬಳ್ಳಿಯ ಅಂಜಲಿ ಮನೆಗೆ ಭೇಟಿ ನೀಡಿಲ್ಲ. ನೊಂದವರ ದುಖವನ್ನು ಆಲಿಸಿಲ್ಲ ಎಂಬ ಆರೋಪವಿದೆ. ಅಂದೇ ದೂಡಿದು ಅಂದೆ ತಿನ್ನುವ ಈ ಬಡವರ ನೋವನ್ನು ಆಲಿಸಿ. ಸಂಕಷ್ಟಕ್ಕೆ ಸ್ಪಂದಿಸಿ. ಹತ್ಯೆಗೀಡಾದ ಅಂಜಲಿ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡಿ ಎಂಬುವುದು ಅವಳಿನಗರದ ಜನತೆ ಆಶಯವಾಗಿದೆ.

ಭದ್ರತೆಯಿಲ್ಲದ ಹುಬ್ಬಳ್ಳಿ-ಧಾರವಾಡ
ಅವಳಿನಗರದಲ್ಲಿ ಭದ್ರತೆ ಕೊರತೆಯಿದೆ. ಮನೆಯಿಂದ ಹೋದವರು ಮರಳಿ ಬರುತ್ತಾರೆ ಎಂಬ ನಂಬಿಕೆ ಇಲ್ಲದಂತಾಗಿದೆ. ಸಿಸಿ ಕ್ಯಾಮೆರ ಇದ್ದು ಇಲ್ಲದಂತಾಗಿವೆ. ಪುಡಿ ರೌಡಿಗಳು, ಬೀದಿ ಕಾಮಣ್ಣರಿಗೆ ಯಾವುದೇ ಕಡಿವಾಣವಿಲ್ಲ. ಪೊಲೀಸ್‌ ಸಿಬ್ಬಂದಿ ಕೊರತೆಯ ನೆಪದಲ್ಲಿ ಸಾರ್ವಜನಿಕರಿಗೆ ರಕ್ಷಣೆ ಸಿಗುತ್ತಿಲ್ಲ. ಇನ್ನೂ ೧೧೨ ವಾಹನಗಳಿದ್ದರೂ ನಿಯಮದಂತೆ ಸಿಬ್ಬಂದಿಗಳಿರುವುದಿಲ್ಲ. ಬೀಟ ಪೊಲೀಸ್‌ ವ್ಯವಸ್ಥೆ ಹದಗೆಟ್ಟಿದೆ. ಕ್ರಿಮಿನಲ್‌ಗಳ ಚಲನವಲಗಳ ಮೇಲೆ ಕಣ್ಣಿಲ್ಲ. ಸಮರ್ಪಕ ಏರಿಯಾಗಳ ಮಾಹಿತಿ ಸಂಬಂಧಪಟ್ಟವರ ಬಳಿ ಉಳಿದಿಲ್ಲ.ನೆಪ ಮಾತ್ರಕ್ಕೆ ಸಸ್ಪಂಡೆನಂತಹ ಕಾರ್ಯ ಮಾಡುವ ಬದಲು ಅಲ್ಲಿ ಠಿಕಾಣಿ ಹೂಡಿದ ಸಿಬ್ಬಂದಿ ಎತ್ತಂಗಡಿಯಿಂದ ಮಾತ್ರ ಸಣ್ಣ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಸೌಜನ್ಯದಿಂದ ವರ್ತಿಸಲಿ
ಪೊಲೀಸರು ಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸುವ ಕೆಲಸವಾಗಬೇಕಿದೆ. ದೂರು ನೀಡಲು ಬಂದವರ ದುಮ್ಮಾನವನ್ನು ಕೇಳುವಂತಾಗಬೇಕಿದೆ. ಅಂದಾಗ ಮಾತ್ರ ಅಂಜಲಿಯಂತವರು ಬಲಿಯಾಗುವುದು ತಪ್ಪುತ್ತದೆ. ಬಂದವರ ದೂರನ್ನು ಕೇಳವಷ್ಟು ವ್ಯವಧಾನ ಉಳಿಯದ ಹಿನ್ನೆಲೆಯಲ್ಲಿಅವಳಿನಗರದೊಳಗೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇನ್ನಾದರೂ ಬೀಳುವುದೇ ಕಡಿವಾಣ?
ರಾಷ್ಟ್ರಮಟ್ಟದಲ್ಲಿ ಹುಬ್ಬಳ್ಳಿ ಕುಖ್ಯಾತಿಗೆ ಒಳಪಡಿಸಿದ ಕೊಲೆ ಪ್ರಕರಣಗಳ ನಂತರವಾದರೂ ಹುಬ್ಬಳ್ಳಿ- ಧಾರವಾಡದಲ್ಲಿ ಅಪರಾಧ ಪ್ರಕರಣಗಳಿಗೆ ಬೀಳುವುದೇ ಕಡಿವಾಣ ಕಾದು ನೋಡಬೇಕಿದೆ.

ಈ ಸುದ್ದಿ ಓದಿ; ವಿಶ್ವದ ಮೊದಲ ಏರ ಟ್ಯಾಕ್ಸಿ ಆರಂಭ

WhatsApp Group Join Now
Telegram Group Join Now
Share This Article
error: Content is protected !!