ಮಲ್ಲಿಕಾರ್ಜುನ ದೇವರ ಜಾತ್ರೆ
ಕಲಘಟಗಿ ಪಟ್ಟಣದ ಬೆಂಡಿಗೇರಿ ಓಣಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವ ಮೇ.೨೦ ರ ಸೋಮವಾರದಂದು ಜರುಗಲಿದೆ.
ಪ್ರತಿವರ್ಷ ವೈಶಾಖ ಮಾಸ, ಶುಕ್ಲಪಕ್ಷ, ದ್ವಾದಶಿ ಮತ್ತು ತ್ರಯೋದಶಿ ತಿಥಿಯಂದು ನಡೆಯಲಿರುವ ಪಟ್ಟಣದ ಬೆಂಡಿಗೇರಿ ಓಣಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವ ನೆರವೇರುತ್ತಾ ಬಂದಿದೆ.
ಮೇ 20ರ ಸೋಮವಾರದಂದು ದೇವಸ್ಥಾನದ ಅರ್ಚಕರಾದ ಶ್ರೀ ವೇ.ಮೂ ವಿರೇಶ ಶಾಸ್ತಿಗಳು ಹಾಗೂ ವೈಧಿಕ ಪುರೋಹಿತ ಬಳಗದ ವತಿಯಿಂದ ಬೆಳಗ್ಗೆ ೬ ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ನೆರೇರಿಸಿ, ನಂತರ ಬೆಳಗ್ಗೆ ೮ ಘಂಟೆಗೆ ಓಣಿಯ ಮುತ್ತೆದೆಯರು, ನವದಂಪತಿಗಳು ಹಾಗೂ ದೇವಸ್ಥಾನದ ಸಮೀತಿಯ ಹಿರಿಯರು ಮತ್ತು ಯುವಕರ ಸಮ್ಮುಖದಲ್ಲಿ ನವಗ್ರಹ ಪೂಜೆ ಹಾಗೂ ಹೋಮ ಹವನ ಕಾರ್ಯಕ್ರಮ ಜರಗುವುದು.
ಮದ್ಯಾಹ್ನ ೧ ಘಂಟೆಗೆ ಮಹಾ ಅನ್ನಪ್ರಸಾದ ನೆರವೇರಿಸಲಾಗುತ್ತದೆ. ಕಾರಣ ಭಕ್ತಾದಿಗಳು ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತನು, ಮನ ದನದದಿಂದ ಸೇವೆ ಸಲ್ಲಿಸಿ ದೇವರ ಕೃಫೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.