ಚೌಕ್ಷೆ ಹು-ಧಾ ನೂತನ ಡಿಸಿಪಿ
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಕುಶಾಲ ಚೌಕ್ಷೆ ನಿಯುಕ್ತಿಗೊಂಡಿದ್ದಾರೆ. ಸದ್ಯ ಬೆಂಗಳೂರಿನ ವಿಧಿ ವಿಜ್ಞಾನ ವಿಭಾಗದ ವಿಭಾಗದ ಜಂಟಿ ನಿರ್ದೇಶಕರಾಗಿರುವ 2018ನೇ ಬ್ಯಾಚಿನ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದು ಇವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯದ ಹಿನ್ನೆಲೆಯಲ್ಲಿ ಮೊದಲು ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ , ಮುಖ್ಯ ಪೇದೆ ಅಮಾನತಿನ ನಂತರ ಡಿಸಿಪಿ ರಾಜೀವರನ್ನುಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡಿರುವ ರಾಜೀವ ಸ್ಥಾನದಲ್ಲಿ ಚೌಕ್ಸೆಯವರನ್ನು ಸರ್ಕಾರ ನೇಮಕ ಮಾಡಿದೆ.