ಹಂತಕರ ಪರ ವಾದ ಮಾಡಲು ವಕೀಲರ ಹಿಂದೇಟು
ವಕೀಲರ ನಡೆ ಸ್ವಾಗತಿಸಿದ ನಿರಂಜನ ಹಿರೇಮಠ
ಹುಬ್ಬಳ್ಳಿ; ಹತ್ಯೆ ಗೀಡಾದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣ ಆರೋಪಿ ಗಳ ಪರ ವಾದಿಸಲು ವಕೀಲರು ಮುಂದಾಗುತ್ತಿಲ್ಲ. ಈ ಮೂಲಕ ವಕೀಲರು ನೊಂದ ಹೆಣ್ಣು ಮಕ್ಕಳ ಎರಡು ಕುಟುಂಬಗಳ ಪರ ನಿಂತಿದ್ದಾರೆ.
ನೇಹಾ ಹಿರೇಮಠ ಹತ್ಯೆ ಮಾಡಿದ ಫಯಾಜ್ ಹಾಗೂ ಅಂಜಲಿ ಅಂಬಿಗೇರ ಕೊಲೆ ಮಾಡಿದ ವಿಶ್ವನನ್ನು ವಕೀಲರು ಬೆಂಬಲಿಸದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರೀತಿ ನಿರಾಕರಣೆಯೊಂದನ್ನೇ ನೆಪವಾಗಿಸಿಕೊಂಡು ಕಾಲೇಜ್ ಆವರಣದಲ್ಲಿಯೇ ನೇಹಾ ಹಿರೇಮಠ ಹಾಗೂ ಮನಡಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ನಡೆದಿತ್ತು.
ಹೂ-ಬಳ್ಳಿಗಳ ಮೂಲಕ ತನ್ನ ಘಮವನ್ನು ನಾಡಿಗೆ ಹರಡುತ್ತಿದ್ದ ಹುಬ್ಬಳ್ಳಿ ನೇಹಾ ಹಾಗೂ ಅಂಜಲಿ ಹತ್ಯೆಯಿಂದ ದೇಶಾದ್ಯಂತ ಸದ್ದು ಮಾಡಿತ್ತು. ಎಲ್ಲರ ಗಮನ ಇದೀಗ ನ್ಯಾಯಾಲಯದತ್ತ ಇದ್ದು, ಆರೋಪಿಗಳಿಗೆ ಯಾವ ಶಿಕ್ಷೆಯಾಗಲಿದೆ ಎಂದು ಎದುರು ನೋಡುತ್ತಿದ್ದಾರೆ.
ವಕೀಲರ ಕಾರ್ಯಕ್ಕೆ ನಿರಂಜನ ಹಿರೇಮಠ ಅಭಿನಂದನೆ;
ಆರೋಪಿಗಳ ಪರ ವಾದ ಮಾಡಲು ವಕೀಲರು ಮುಂದಾಗದಿರುವುದಕ್ಕೆ ಎಲ್ಲೆಡೆ ಮೆಚ್ಚು ವ್ಯಕ್ತವಾಗುತ್ತಿದೆ. ವಕೀಲರ ಕಾರ್ಯ ಕ್ಕೆ ನೇಹಾಳ ತಂದೆ ನಿರಂಜನ ಹಿರೇಮಠ ಅಭಿನಂದನೆ ಸಲ್ಲಿಸಿದ್ದಾರೆ. ಹುಬ್ಬಳ್ಳಿ ವಕೀಲರ ಕಾರ್ಯ ದೇಶಕ್ಕೆ ಮಾದರಿಯಾಗಲಿ ಎಂದಿದ್ದಾರೆ. ವಕೀಲರ ಈ ನಡೆಯಿಂದ ಮುಂದೆ ಅಪರಾಧ ಕೃತ್ಯ ಎಸಗುವವರಿಗೆ ತಕ್ಕ ಪಾಠವಾಗಲಿ. ದೇಶದ ಯಾವುದೇ ವಕೀಲರು ಈ ಪ್ರಕರಣದ ಪರ ವಾದ ಮಾಡದಿರಲಿ. ಮುಂದೆ ಇಂತಹ ಅನಾಹುತಗಳಿಗೆ ಕಡಿವಾಣ ಬೀಳಲಿ ಎಂದು ನಿರಂಜನ ಹಿರೇಮಠ ಅವರು ಹುಬ್ಬಳ್ಳಿ ಧ್ವನಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ವಿಜ್ಞಾನಿಯಾಗಬೇಕಿದ್ದ ಕಾಶಿನಾಥ್ ಸ್ಟಾರ್ ಡೈರೆಕ್ಟರ್ ಆಗಿದ್ದು ಹೇಗೆ..?