ಹುಬ್ಬಳ್ಳಿ: ಇಲ್ಲಿಯ ಬಾಂಸೆಫ್ ಹಾಗೂ ಯುನಿಟಿ ಆಫ್ ಮೂಲ ನಿವಾಸಿ ಸಮಾಜದಿಂದ ೪೦ನೇ ರಾಷ್ಟ್ರೀಯ ಅಧಿವೇಶನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಈಡಿಗ ಭವನದಲ್ಲಿ ಜೂ. ೭ ರಿಂದ ೯ರವರೆಗೆ ಆಯೋಜಿಸಲಾಗಿದೆ ಎಂದು ಬಾಂಸೆಫ್ ರಾಷ್ಟ್ರೀಯ ಉಪಾಧ್ಯಕ್ಷ ಸುಭಾಷ ಶೀಲವಂತರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಟ ಚೇತನ ಅಹಿಂಸಾ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಗಳಾಗಿ ಮಾಜಿ ಐಎಎಸ್ ಅಧಿಕಾರಿ ಕವಿತಾ ಸಿಂಗ್, ಎನ್‌ಬಿಎಫ್‌ನ ವಿಜಿಆರ್ ನರಗೋನಿ, ಬಾಂಸೆಫ್‌ನ್ ರಾಷ್ಟ್ರೀಯ ಅಧ್ಯಕ್ಷ ಕಮಲಾಕಾಂತ ಅಶೋಕ ಕಾಳೆ, ವಲಯ ಕಾರ್ಯದರ್ಶಿ ಸುರೇಶ ವಾಹೇದಾ, ಸದಸ್ಯ ಡಾ. ವೇದಪ್ರಕಾಶ, ಡಾ. ಅಲಿಂಖಾನ್ ಫಾಲಾಕ್ಷಿ ಭಾಗವಹಿಸುವರು ಎಂದರು.
ಮೂರು ದಿನಗಳ ಕಾಲ ನಡೆಯುವ ಅಽವೇಶನದಲ್ಲಿ ಎರಡನೇ ದಿನ ಸಾಮಾಜಿಕ ವಿಕಾಸ ಹಾಗೂ ವ್ಯವಸ್ಥೆಯ ಪರಿವರ್ತವನೆಯಲ್ಲಿ ಬಾಂಸೆಫ್‌ನ ಪಾತ್ರ ಮತ್ತು ಸಾಧನೆ, ಮೂರನೇ ದಿನ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಆಳುವ ವರ್ಗದಿಂದ ಅಪಾಯವಿದೆಯೇ ಎನ್ನುವ ವಿಷಯಗಳ ಕುರಿತು ವಿಚಾರಗೋಷ್ಠಿಯ ಇರಲಿದೆ ಎಂದು ತಿಳಿಸಿದರು.
ರಾಷ್ಟ್ರದ ವಿವಿಧ ಭಾಗಗಳಿಂದ ಹಲವು ಕ್ಷೇತ್ರಗಳಲ್ಲಿ ತೊಡಗಿರುವ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ. ಈ ಅಧಿವೇಶನವನ್ನು ಶಾಹು ಮಹಾರಾಜರ ೧೫೦ ನೇ ಜಯಂತ್ಯುತ್ಸವಕ್ಕೆ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು.