ಕಾಲೇಜ್ ಆವರಣದಲ್ಲೇ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ಅವರ ಜಾತಿ ಪ್ರಮಾಣ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಂಗಾಯತ ಸಮುದಾಯದ ನಿರಂಜನಯ್ಯ ಅವರು ಅಕ್ರಮವಾಗಿ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಸಮತಾ ಸೇನಾ ದೂರು ನೀಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ನಿರಂಜನ ಹಿರೇಮಠ ಅವರು ತಮ್ಮ ಪುತ್ರಿ ನೇಹಾ ಅವರಿಗೆ ಬೆಂಗಳೂರಿನ ವಿಳಾಸ ತೋರಿಸಿ ಎಸ್ ಸಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದಾರೆ ಎಂದು ಸಮತಾ ಸೇನೆ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಸಮತಾ ಸೇನಾ ವಿವಿಧ ದಲಿತ ಸಂಘ ಸಂಸ್ಥೆಗಳಮಹಾಮಂಡಳ ಮಹತ್ವದ ದಾಖಲೆಗಳನ್ನ ಬಿಡುಗಡೆ ಮಾಡಿದೆ. ನೇಹಾ ಹಿರೇಮಠ ಲಿಂಗಾಯತ ಸಮುದಾಯದಲ್ಲಿದ್ದು, ಬೇಡ ಜಂಗಮ ಪರಿಶಿಷ್ಟ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪ್ರಮಾಣ ಪತ್ರವನ್ನು ರದ್ದು ಮಾಡಬೇಕು ಹಾಗೂ ನಿರಂಜನಯ್ಯ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಸೇನೆಯು ಒತ್ತಾಯಿಸಿದ್ದಾರೆ.
ಸಮತಾ ಸೇನೆಯ ಮನವಿ ಪತ್ರದ ಸಂಪೂರ್ಣ ವಿವರ ಇಲ್ಲಿದೆ
” ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ತೀವ್ರ ಕೋಲಾಹಲದ ಮಧ್ಯ ಹಲವು ಸತ್ಯೆಗಳನ್ನ ಮರೆಮಾಚುವ ಮತ್ತು ಸಾವಿನ ಮನೆಯಲ್ಲಿ ರಾಜಕೀಯ ನಡೆಸುವ ಕಾರಣ ಯಾರಿಗೂ ತಿಳಿದಿರಲೇ ಇಲ್ಲ. ನೇಹಾ ನಿರಂಜನ ಹಿರೇಮಠ ಹುಬ್ಬಳ್ಳಿಯ ರಹವಾಸಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಪ್ರಕರಣದ ನಂತರ ರಾಜ್ಯದ ರಾಷ್ಟ್ರದ ಅನೇಕ ಲಿಂಗಾಯತ ಶರಣರು -ಮುಖಂಡರು ಇವರ ನಿವಾಸಕ್ಕೆ ತೆರಳಿದ್ದು ಸಂತೈಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ? ಆದರೆ, ಲಿಂಗಾಯತರಲ್ಲೇ ಶ್ರೇಷ್ಟ ಜಂಗಮ ಗುರುಗಳಸ್ಥಾನದಲ್ಲಿರುವ ನಿರಂಜನ ಹಿರೇಮಠ ತಾನು ಸಹ ಪರಿಶಿಷ್ಟ ಎಂಬ ಹಣೆಪಟ್ಟಿಯನ್ನ ಸ್ರಷ್ಟಿಸಿಕೊಂಡು ಖೊಟ್ಟಿ ಜಾತಿ ಪ್ರಮಾಣಪತ್ರವನ್ನ ಪಡೆದು ಮೂಲ ಪರಿಶಿಷ್ಟರಿಗೆ ವಂಚಿಸುವ ಹುನ್ನಾರ ಮಾಡಿದ್ದಾರೆ. ಇದರಿಂದ ತನ್ನ ಮಗಳ ಸಾವಿನಲ್ಲಿ ನಾಟಕೀಯವಾದಂತಹ ಅಸಹಜ ಹೇಳಿಕೆಗಳಿಂದ ಕಾನೂನು ಸುವ್ಯವಸ್ಥೆ ಹದಗೆಡಿಸುವಂತಹ ಹೀನ ವಾತಾವರಣಕ್ಕೆ ಕಾರಣವಾಗಿದ್ದು ಬೆಂಗಳೂರು ಹೊಂಗಸಂದ್ರದ ಮೂಲಕ ಪಡೆದ ನೇಹಾ ನಿರಂಜನ ಹಿರೇಮಠ ಳ “ಬೇಡಜಂಗಮ “ಪಜಾ ಜಾತಿಪ್ರಮಾಣ ಪತ್ರ ಎನ್ನುವುದು ಈಗ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ಸಂಘಟನೆಯ ತನಿಖೆಯಿಂದ ತಿಳಿದುಬಂದಿದೆ. ಈ ಮಾಹಿತಿಯನ್ವಯ RD0038208524200 ಯಿಂದ ಸಾಬೀತಾಗಿದ್ದು ತಕ್ಷಣ ಈ ಖೊಟ್ಟಿ ಜಾತಿಪ್ರಮಾಣಪತ್ರ ನೀಡಿದ ದುಷ್ಟ ಅಧಿಕಾರಿಗಳ ಸಹಿತ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ವಹಿಸಲು ಮಾನ್ಯಡಿಸಿಆರ ಇ ಅಧಿಕಾರಿಗಳು ತಕ್ಷಣ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಆಗ್ರಹಿಸಿ ದೂರೂ ಸಲ್ಲಿಸಲಾಗಿದೆ