ಮಾನವೀಯ ಸೇವೆಗೆ ಜಿತೇಂದ್ರ ಮಜೇಥಿಯಾ ಮಾದರ
ಹುಬ್ಬಳ್ಳಿ; ಮಜೇಥಿಯಾ ಫೌಂಡೇಶನ್ ಆಶ್ರಯದಲ್ಲಿ ಅಪಘಾತ ಅಥವಾ ಇನ್ನಾವುದೇ ವೈದ್ಯಕೀಯ ಕಾರಣಗಳಿಂದಾಗಿ ಕೈ ಕಾಲುಗಳನ್ನು ಕಳೆದುಕೊಂಡವರನ್ನು ಮೂರುಸಾವಿರ ಮಠದ ಸಭಾ ಭವನದಲ್ಲಿ ಉಚಿತ ಕೃತಕ ಕೈ ಕಾಲು ಅಳತೆಯನ್ನು ಸುಮಾರು 85 ತೆಗೆದುಕೊಳ್ಳಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ಶ್ರೀಧರ ದಂಡಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಜೇಥಿಯಾ ಫೌಂಡೇಶನ್ ಅವರು ದಿನ ನಿತ್ಯ ಸಮಾಜ ಸೇವೆ ಮಾಡುವದುರೊಂದಿಗೆ ದಿವ್ಯಾಂಗ, ವಿಶೇಷ ಚೇತನರು, ವಿಕಲಾಂಗದವರಿಗೆ, ಬಡ ಜನತೆ ಬಗ್ಗೆ ಅತಿಯಾದ ಸೇವೆಯಿಂದ ಅಂತಹ ಜನರಿಗೆ ಜಿತೇಂದ್ರ ಮಜೇಥಿಯಾ ಅವರು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.
ಕೈಕಾಲು ಕಳೆದುಕೊಂಡವರು ತಮ್ಮ ಬದುಕಿನ ಬಗ್ಗೆ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ ದಿನ ನಿತ್ಯ ಪರಾಲಂಬಿ ಆಗಿರುತ್ತಾರೆ ಅಂತವರನ್ನು ಕಂಡ ಮಜೇಥಿಯಾ ಅವರು ಬೇರೆಯವರ ಮೇಲೆ ಅವಲಂಬಿತರಾಗಿರಬಾರದು ಅವರ ಬದುಕನ್ನು ಅವರೇ ಸುಂದರಗೊಳಿಸಬೇಕು ತಮ್ಮ ಕಾಯಕ ದಿನ ನಿತ್ಯ ಚಟುವಟಿಕೆ ತಾವೇ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಜೇಥಿಯಾ ಅವರು ಕೃತಕ ಕೈಕಾಲು ಜೋಡಣೆ ಹಾಗೂ working hands ನೀಡುತ್ತಾ ಬಂದಿರುವುದು ದಿವ್ಯಾಂಗದವರಿಗೆ ಅವರ ಬಾಳಿನ ಜ್ಯೋತಿಯಾಗಿದ್ದಾರೆ. ಫಲಾನುಭವಿಗಳು ಅವರು ನೀಡಿದ ಸಲಕರಣೆಗಳನ್ನು ಗೌರವದಿಂದ ಕಂಡು ಉಪಯೋಗಿಸಿಕೊಳ್ಳಬೇಕು ಕರ್ನಾಟಕ ರಾಜ್ಯ ಮೂಲೆ ಮೂಲೆಗಳಿಂದ ಆಗಮಿಸಿದ ದಿವ್ಯಾಂಗದವರಿಗೆ ನಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ನಾವು ಎಂದು ಮರಿಯಬಾರದು ಜಿತೇಂದ್ರ ಮಜೇಥಿಯಾ ಅವರು ದೇವರ ಮೇಲೆ ಅಪಾರ ನಂಬಿಕೆಯಿಂದ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿದ್ದು ಶ್ಲಾಘನೀಯವಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಜೇಥಿಯಾ ಫೌಂಡೇಶನ್ ಚೇರಮನ್ ರಾದ ಜಿತೇಂದ್ರ ಮಜೇಥಿಯಾ ಅವರು ವಹಿಸಿ ಮಾತನಾಡಿದ ಅವರು ಬಡವರಿಗಾಗಿ, ವಿಶೇಷ ಚೇತನರಿಗಾಗಿ, ದಿವ್ಯಾಂಗ ದವರಿಗೆ ಮಜೇಥಿಯಾ ಫೌಂಡೇಶನ್ ದಿಂದ ಸದಾ ಸೇವೆ ಮಾಡಲು ನಮ್ಮ ಫೌಂಡೇಶನ್ ದ ಗುರಿಯಾಗಿದೆ ನಮ್ಮ ಸಂಸ್ಥೆಯಿಂದ ಸೇವೆ ಮಾಡಲು ಜನರ ಸಹಕಾರ ಅತ್ಯಮೂಲ್ಯವಾಗಿದೆ ಅವರು ಕೊಟ್ಟಂತಹ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ಮಜೇಥಿಯಾ ಫೌಂಡೇಶನ್ ಸಮಾಜ ಸೇವೆ ಮಾಡಲು ಸಾಧ್ಯವಾಗಿದೆ ಎಂದು ನುಡಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಜನಪ್ರಿಯ ಶಾಸಕರಾದ ಪ್ರಸಾದ ಅಬ್ಬಯ್ಯ ಮಾತನಾಡಿ ಜಿತೇಂದ್ರ ಮಜೇಥಿಯಾ ಅವರು ಮಾಡುತ್ತಿರುವ ಸೇವೆ ಅರ್ಥಪೂರ್ಣವಾಗಿದ್ದು ಅವರ ಸೇವೆ ಇತರರಿಗೆ ಮಾರ್ಗದರ್ಶನವಾಗಿದೆ ಅವರ ಜೀವನ ಬಡ ಜನತೆಗಾಗಿ ಮೀಸಲಾಗಿ ಇಟ್ಟಿದ್ದಾರೆ ಅವರ ಸೇವೆ ಇನ್ನೂ ಜನತೆಗೆ ಮುಟ್ಟಲಿ ಎಂದು ಹಾರೈಸಿದರು.
ಅನ್ವರ ಮುಧೋಳ, ಡಾ|| ಕೆ ರಮೇಶಬಾಬು, ಕಶ್ಯಪ್ ಮಜೇಥಿಯಾ, ಡಾ|| ಜ್ಯೋತಿ ಕಾಚಾಪುರ, ಡಾ|| V. B. ನಿಟಾಲಿ, H.R. ಪ್ರಹ್ಲಾದ್ ರಾವ್, ಅಮೃತಬಾಯ ಪಟೇಲ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ದಯಾ ಪಟೇಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹುಬ್ಬಳ್ಳಿಯ ಯುಥ್ ಪುಟ್ ಯುವರ್ ವೆಸ್ ಸಂಸ್ಥೆಯ ಮುಖ್ಯಸ್ಥರಾದ ಶಂಕರ ಕಾಮಟೆ ಹಾಗೂ ಅವರ ಸಂಗಡಿಗರು ಇವರಿಂದ ಅಂಗವಿಕಲರ ಅಳತೆಯನ್ನು ತೆಗೆದು ಕೊಳ್ಳಲಾಯಿತು.
ಪ್ರಾರಂಭದಲ್ಲಿ ಸುನೀಲ ಕುಕ್ಕನೂರ ಸ್ವಾಗತಿಸಿದರು ಕಾರ್ಯಕ್ರಮ ನಿರೂಪಣೆ ರೇಖಾ ಆಪ್ಟೆ ಹಾಗೂ ಕೊನೆಗೆ ನವೀನ ಮಾಲಿನ ವಂದಿಸಿದರು.