ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ಪರವಾಗಿ ಸತತ ಐದು ಬಾರಿ ಸಂಸದರಾಗಿ ಚುನಾಯಿತರಾಗಿರುವ ಶ್ರೀ ಪ್ರಹ್ಲಾದ ಜೋಶಿ ಇವರು, ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದ ಭಾರತ -03 ಸರ್ಕಾರದಲ್ಲಿ, ಸತತವಾಗಿ ಎರಡನೆಯ ಅವಧಿಗೆ ಕೇಂದ್ರ ಸಂಪುಟ ಸಚಿವರಾಗಿ, ಆಹಾರ, ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಜವಾಬ್ದಾರಿ ಸ್ವೀಕರಿಸಿ, ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸಿರುವ ಪ್ರಯುಕ್ತ , ಹುಬ್ಬಳ್ಳಿಯ ಎಸ್.ಎಸ್. ಕೆ. ಸಮಾಜದ ಮೂರು ಪಂಚಾಯತಿ ಸಮಿತಿಗಳಾದ ಎಸ್. ಎಸ್. ಕೆ.ವಿಶ್ವೇಶ್ವರ ನಗರ ಪಂಚಾಯತ, ಎಸ್. ಎಸ್. ಕೆ. ಸಿದ್ಧಾರೂಢ ಮಠ ಪಂಚಾಯತ ಹಾಗು ಎಸ್.ಎಸ್. ಕೆ. ಹೆಗ್ಗೇರಿ ಪಂಚಾಯತ ವತಿಯಿಂದ, ಶಾಲು,ಹೂಮಾಲೆ ವ ಸಿಹಿ ಯೊಂದಿಗೆ ಸತ್ಕರಿಸಿ, ಶುಭ ಕೋರಲಾಯಿತು.
ನೇತೃತ್ವವನ್ನು ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿ ಹುಬ್ಬಳ್ಳಿ ಧಾರವಾಡ ಇದರ ಉಪ ಮುಖ್ಯ ಧರ್ಮದರ್ಶಿ ಭಾಸ್ಕರ ಎನ್. ಜಿತೂರಿಯವರು ವಹಿಸಿದ್ದರು.
ಶ್ರೀ ರಾಜೇಶ ಜಡಿ ಅಧ್ಯಕ್ಷರು, ಎಸ್. ಎಸ್. ಕೆ.ವಿಶ್ವೇಶ್ವರ ನಗರ ಪಂಚಾಯತ, ಟ್ರಸ್ಟಿಗಳಾದ ದತ್ತುಸಾ ಅಥಣಿ, ಶ್ರೀ ಟಿ.ವಿ. ಪೂಜಾರಿ ಗೌರವ ಸಹ ಕಾರ್ಯದರ್ಶಿ ಕೇಂದ್ರ ಪಂಚಾಯತ್, ಶ್ರೀ ಶಂಕರ ಹಬೀಬ ಶ್ರೀ ಆನಂದ ವೈ. ಭಾಂಡಗೆ, ಶ್ರೀ ಸೂರಜ ವಿ. ಮಗಜಿಕೊಂಡಿ, ಶ್ರೀ ಅರುಣ ಇರಕಲ್, ಶ್ರೀ ಅಂಬಾಸಾ ಮೇಹರವಾಡೆ, ಎಸ್. ಎಸ್. ಕೆ. ಸಿದ್ಧಾರೂಢ ಮಠ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಪರಶುರಾಮ ಎಲ್. ಹಬೀಬ, ಟ್ರಸ್ಟಿಗಳಾದ ಶ್ರೀ ಪಿ.ಕೆ.ಕಾಟಿಗರ,ಎಸ್. ಎಸ್. ಕೆ. ಹೆಗ್ಗೇರಿ ಪಂಚಾಯತದ ಅಧ್ಯಕ್ಷರಾದ ಶ್ರೀ ರಾಜುಸಾ ಖೋಡೆ, ಟ್ರಸ್ಟಿ ಶ್ರೀ ಶ್ರೀನಿವಾಸ ಜಿತೂರಿ, ಎಸ್.ಎಸ್. ಕೆ. ಕಾಲೇಜಿನ ಉಪಾಧ್ಯಕ್ಷರಾದ ಶ್ರೀ ರಾಜು ಧರ್ಮದಾಸ, ಯುವ ಮುಖಂಡರಾದ ಶ್ರೀ ಮೋತಿಲಾಲಸಾ ಕಲಬುರ್ಗಿ, ಶ್ರೀ ವೆಂಕಟೇಶ ಹಬೀಬ, ಶ್ರೀ ಗಣೇಶ ಕಬಾಡಿ ಸೇರಿದಂತೆ ಯುವಕ ಮಂಡಳದ ಪ್ರಮುಖರು, ಹಿರಿಯರು ಉಪಸ್ಥಿತರಿದ್ದರು.