ಎಸ್‌ಎಸ್‌ಕೆ ಸಮಾಜ ಇತರೆ ಸಮುದಾಯಗಳಿಗೆ ಮಾದರಿ
ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜದವರು ನೌಕರಿಗಾಗಿ ಆಸೆ ಪಟ್ಟವರಲ್ಲ. ಸ್ವಯಂ ಉದ್ಯೋಗದಿಂದ ತಮ್ಮನ್ನು ಗುರುತಿಸಿ ಕೊಂಡು ನೂರಾರು ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು. ನಗರದ ಆರ್.ಎನ್. ಶೆಟ್ಟಿ ಮುಖ್ಯ ರಸ್ತೆಯಲ್ಲಿರುವ ಸನ್ಮಾನ ಕಾಲನಿಯಲ್ಲಿ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಸ್‌ಎಸ್‌ಕೆ ಸಮಾಜದವರು ಧಾರವಾಡ ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಫ್ಯಾಬ್ರಿಕೇಶನ್, ವಾಲ್ಸ್ ಮೇಕಿಂಗ್, ಇತ್ಯಾದಿ 200ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾದುದು ಎಂದರು.
ನಾನು ಬೆಳಗಾವಿ ಸಂಸದನಾದರೂ ಇಲ್ಲಿಯ ಎಸ್‌ಎಸ್‌ಕೆ ಸಮಾಜ ಹಾಗೂ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳ ಸಂಘದ ಚಟುವಟಿಕೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ,.. ಉದ್ಯಮಿ ನಾರಾಯಣ ನಿರಂಜನ, ಸಂಘದ ಕಾರ್ಯದರ್ಶಿ ಸಂತೋಷ ಕಾಟವೆ, ಪದಾಧಿಕಾರಿಗಳಾದ ಕೃಷ್ಣಾಸಾ ಮಿಸ್ಕಿನ್, ಯಲ್ಲಪ್ಪ ರಂಗರೇಜಾ, ಶ್ರೀಕಾಂತ ಕಬಾಡಿ, ಅಮೃತ ಹಬೀಬ, ಶೇಷಗಿರಿ ನಾಕೋಡ, ಮಹದೇವ ಸೋಳಂಕಿ, ಇತರರು ಇದ್ದರು. ಎ.ಟಿ. ಪವಾರ ಅಧ್ಯಕ್ಷತೆ ವಹಿಸಿದ್ದರು.