Ad imageAd image

ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ : 8 ನಿರ್ದೇಶಕ ಸ್ಥಾನಗಳಿಗೆ 17 ಅಭ್ಯರ್ಥಿಗಳು

Hubballi Dhwani
ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ : 8 ನಿರ್ದೇಶಕ ಸ್ಥಾನಗಳಿಗೆ 17 ಅಭ್ಯರ್ಥಿಗಳು
WhatsApp Group Join Now
Telegram Group Join Now

ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ

8 ನಿರ್ದೇಶಕ ಸ್ಥಾನಗಳಿಗೆ 17 ಅಭ್ಯರ್ಥಿಗಳು

ಹುಬ್ಬಳ್ಳಿ; ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿರುವ ಉಮೇದುವಾರರ ಅಂತಿಮ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಮೂವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ. 9 ನಿರ್ದೇಶಕ ಸ್ಥಾನಗಳಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಧಾರವಾಡ ಜಿಲ್ಲೆಯ ಧಾರವಾಡ, ಅಳ್ಳಾವರ, ನವಲಗುಂದ, ಅಣ್ಣಿಗೇರಿ ತಾಲೂಕು ಕ್ಷೇತ್ರಕ್ಕೆ ಶಂಕರಪ್ಪ ಮುಗದ ಮತ್ತು ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿ ಸ್ಪರ್ಧಿಸಿದ್ದಾರೆ. ಕಲಘಟಗಿ ತಾಲೂಕು ಸ್ಥಾನಕ್ಕೆ ಗೀತಾ ಮರಲಿಂಗಣ್ಣವರ ಮತ್ತು ಹನಮಂತಪ್ಪ ಕೊರವರ ಸ್ಪರ್ಧಿಸಿದ್ದಾರೆ. ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ
ಮತ್ತು ಹುಬ್ಬಳ್ಳಿ ನಗರ ತಾಲೂಕು ಕ್ಷೇತ್ರದಲ್ಲಿ ಗಂಗಪ್ಪ ಮೊರಬದ ಮತ್ತು ಸುರೇಶ ಬಣವಿ ಕಣದಲ್ಲಿದ್ದಾರೆ.

ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಕ್ಷೇತ್ರದಲ್ಲಿ ಗದಿಗೆಪ್ಪ ಕಿರೇಸೂರ ಮತ್ತು ನೀಲಕಂಠಪ್ಪ ಅಸೂಟಿ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೀಶ್ವರ ತಾಲೂಕು ಕ್ಷೇತ್ರದಲ್ಲಿ ಲಿಂಗರಾಜಗೌಡ ಪಾಟೀಲ, ಶೇಖಣ್ಣ ಕಾಳೆ ಸ್ಪರ್ಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಕ್ಷೇತ್ರಕ್ಕೆ ಉಮಾಮಹೇಶ್ವರ ಹೆಗಡೆ, ಸುರೇಶ್ಚಂದ್ರ ಹೆಗಡೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಕ್ಷೇತ್ರಕ್ಕೆ ಪರಶುರಾಮ ನಾಯ್ಕ, ಮಂಜುನಾಥ ಹೆಗಡೆ ಮತ್ತು ಸಾಧನಾ ರಾಜೇಶ ಭಟ್ಟ, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಕ್ಷೇತ್ರಕ್ಕೆ ಪ್ರಶಾಂತ ಸಭಾಹಿತ, ಶಂಕರ ಹೆಗಡೆ ಸ್ಪರ್ಧಿಸಿದ್ದಾರೆ.

ಉಮೇದುವಾರರಿಗೆ ಚಿಹ್ನೆ ಹಂಚಿಕೆ ಮಾಡಲಾಗಿದೆ. ಜೂ. 30ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಧಾರವಾಡ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಮತದಾನ, ನಂತರ ಮತ ಎಣಿಕೆ ನಡೆಯಲಿದೆ.

WhatsApp Group Join Now
Telegram Group Join Now
Share This Article
error: Content is protected !!