ರಾಜ್ಯ ರೈತ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ
ಕಲಘಟಗಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ
ಕಲಘಟಗಿ: ತಾಲೂಕಿನ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಪಿ) ರಾಜ್ಯ ರೈತ ಸಂಘಟನೆ ಒಕ್ಕೂಟ ಹಾಗೂ ವಿವಿಧ ರೈತ ಸಂಘಟನೆಗಳು ಕಲಘಟಗಿ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದವು.
ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತಾಲೂಕಿನ ರೈತ ವರ್ಗದವರು ಸುಮಾರು ೩೦ಕ್ಕೂ ಅಕ ಟ್ರ್ಯಾಕ್ಟರ್ ಗಳೊಂದಿಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಳೆಯಿಂದ ಬೆಳೆ ಹಾಳಾಗಿದ್ದು, ರೈತರ ಖಾತೆಗೆ ನೇರವಾಗಿ ೫೦,೦೦೦ ಪ್ರತಿ ಎಕರೆಗೆ ಪರಿಹಾರ ನೀಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಿ. ರೈತರ ಸಂಪೂರ್ಣ ಸಾಲ ಮನ್ನಾ , ಬರಗಾಲ ಅತಿವೃಷ್ಟಿ ಬೆಳೆ ನಷ್ಟ ಪರಿಹಾರದ ಮೊತ್ತ ಎನ್ ಡಿ ಆರ್ ಎಫ್ ಮಾನದಂಡ ಬದಲಾಯಿಸಿ ಹಾಗೂ ಸಂಸದರ ನಿಯಿಂದ ಕಾಲುವೆ ಕೆರೆಗಳನ್ನು ಪುನಶ್ಚೇತನ ಹಾಗೂ ನಕಲಿ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳಿಗೆ, ಕಡಿವಾಣ ಹಾಕಿ. ಬಗರು ಹುಕಂ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ಯಾವುದೇ ಷರತ್ತು ಇಲ್ಲದೆ ರೈತರಿಗೆ ಸಕಾಲಕ್ಕೆ ಪೂರೈಸಿ, ಕೃಷಿ ಸನ್ಮಾನ ಯೋಜನೆ ಮರು ನಿಗದಿತ ಸಮಯದಲ್ಲಿ ಜಾರಿಗೊಳಿಸಲು ತಾಲೂಕಿನ ರೈತರು ರೈತ ಮುಖಂಡರು ಪ್ರತಿಭಟನೆ ಮುಖಾಂತರ ಒತ್ತಾಯಿಸಿದರು.
ಗ್ರೇಡ್ ೨ ತಹಶೀಲ್ದಾರ್ ಬಸವರಾಜ್ ಹೊಂಕಣ್ಣನವರ ಹಾಗೂ ಕೃಷಿ ಇಲಾಖೆ ಅಕಾರಿಗಳಾದ ಅಮರ ನಾಯ್ಕರ್ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಳವಪ್ಪ ಬಳಿಗೇರ್, ಪರಶುರಾಮ್ ಎತ್ತಿನ ಗುಡ್ಡ, ಮಹೇಶ್ ಬೆಳಗಾವ್ಕರ್, ವೀರೇಶ್ ಸೊಬರದ ಮಠ, ವಸಂತ ಡಾhಪ್ಪನವರ,ಸಿದ್ದಯ್ಯ ಕಟ್ನೂರುಮಠ, ವಿಮಲ್ ದೇವಲಾಪುರ,ಶಂಭು ಬಳಗೇರ್, ಶಂಕ್ರಣ್ಣ ತಿಪ್ಪಣ್ಣವರ್ (ಗಡ್ಡ) ವಿಜಯ್ ಆರ್ಕಸಲಿ,ಸಹದೇವ್ ಕುಂಬಾರ್, ತಾಲೂಕಿನ ರೈತ ವರ್ಗ,ರೈತ ಸಂಘಟನೆಗಳು ಕಾರ್ಯಕರ್ತರು ಉಪಸ್ಥಿತರಿದ್ದರು.