Ad imageAd image

ನಾಯಿ ತಿಂದು ಹಾಕಿದ ಚಿರತೆ!

Hubballi Dhwani
ನಾಯಿ ತಿಂದು ಹಾಕಿದ ಚಿರತೆ!
WhatsApp Group Join Now
Telegram Group Join Now

ನಾಯಿ ತಿಂದು ಹಾಕಿದ ಚಿರತೆ

ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಹೊಲದ ಮನೆಯಲ್ಲಿ ಕಟ್ಟಿದ್ದ ಸಾಕುನಾಯಿಯನ್ನು ಚಿರತೆಯೊಂದು -ತಿಂದು ಹಾಕಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಮಹಾದೇವಪ್ಪ ದೇಸಾಯಿ ಅವರು ಬೆಳಿಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಮನೆ ಹೊರಗೆ ಕಟ್ಟಿರುವ ನಾಯಿ ತಿಂದು ಹಾಕಿದ್ದು ಮನೆಯ ಸುತ್ತಮುತ್ತ ಹಾಗೂ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಹಲವು ದಿನಗಳಿಂದ ತಾಲೂಕಿನ ಸುತಗಟ್ಟಿ, ತಬಕದಹೊನ್ನಳ್ಳಿ ಹಾಗೂ ಮಲಕನಕೊಪ್ಪ ಗ್ರಾಮದ ಹೊರವಲ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ಜಮೀನನಲ್ಲಿ ಕಂಡು ಬಂದ ಚಿರತೆ ಹೆಜ್ಜೆ
ಗುಡ್ಡಗಾಡುಗಳಲ್ಲಿ ಚಿರತೆ ಕಂಡು ಬರುತ್ತಿರುವದರಿಂದ ರೈತರು ಜಮೀನಿಗೆ ತೆರಳಲು ಭಯ ಪಡುವಂತೆ ಆಗಿದೆ.

’ಈ ಭಾಗದ ಪರಿಸರದಲ್ಲಿ ಸಹಜವಾಗಿ ಚಿರತೆಗಳು ಓಡಾಡುವ ತಾಣವಾಗಿದ್ದು, ರೈತರು ಜಮೀನಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕು. ಚಿರತೆ ಹೆಜ್ಜೆ, ಜಾಡು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ’ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು.

WhatsApp Group Join Now
Telegram Group Join Now
Share This Article
error: Content is protected !!