ಕಲಘಟಗಿ: ಕಲ್ಕತ್ತಾದಲ್ಲಿ ಕಾರ್ಯನಿರತ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಖಂಡಿಸಿ ಕಲಘಟಗಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಮ್ಮಿಗಟ್ಟಿ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ತಹಶೀಲ್ದಾರ ಕಚೇರಿವರೆಗೆ ತೆರಳಿ ಗ್ರೇಡ್ -೨ ತಹಶೀಲ್ದಾರ್ ಬಸವರಾಜ ಹೊಂಕಣ್ಣವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಡಾ.ಮಹೇಶ ತಿಪ್ಪಣ್ಣವರ, ಡಾ.ವಿ.ಡಿ.ಉಣಕಲಕರ, ಡಾ. ವಿ.ಸಿ.ಮಲ್ಲಿಗವಾಡ, ಡಾ. ಬಸವರಾಜ ಭಾಸುರ, ಡಾ.ಮುತ್ತುರಾಜ ಪಾಟೀಲ ,ಡಾ.ಬಿ.ಎಂ.ಹಿರೇಮಠ,ಡಾ. ಸುಜಯ ಕರಿಂಡಿ, ಡಾ.ಸಂಜಯ ಕಟ್ಟಿ , ಡಾ.ಜಿ.ಕೆ ಕುಂಭಾರ, ಡಾ.ವಿಶ್ವನಾಥ ಕರ್ಲವಾಡ, ಡಾ.ಮಾಲಿಪಾಟೀಲ , ಡಾ.ಎಸ್.ಎನ್.ಹೊಸಳ್ಳಿ
ಡಾ.ಶೋಭಾ ಕುಡಚಿ , ಡಾ.ಗೌತಮ್ ಪಾಟೀಲ, ಡಾ.ಸಮತಾ ಮಲ್ಲಾಪುರ, ಡಾ.ಸತೀಶ ಮಲ್ಲಾಪುರ, ಡಾ.ನಾಗರಾಜ ಹಾವೇರಿ, ಡಾ.ಶ್ವೇತಾ ಕುಭಿಹಾಳ, ಡಾ.ಪಲ್ಲವಿ ಪಾಟೀಲ, ಡಾ.ಜಿಲಾನಿ, ಡಾ.ಸಾಗರ ಧಾನಿ, ಡಾ.ಸಾಗರ ಕಾಮಧೇನು ಸೇರಿದಂತೆ ಮತ್ತಿತರರು ಇದ್ದರು.