ಸರ್ ಸಿದ್ದಪ್ಪ ಕಂಬಳಿ ಜನ್ಮದಿನಾಚರಣೆ
ಹುಬ್ಬಳ್ಳಿ: ಮುಂಬೈ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ , ಪ್ರಾಂತ್ಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕರ್ನಾಟಕ ರಾಜ್ಯವನ್ನು ಸ್ಥಾಪಿಸಲು ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿದ ಮೇರು ವ್ಯಕ್ತಿ . ಶಿಕ್ಷಣ, ಆಡಳಿತ , ರಾಜಕೀಯದಲ್ಲಿ ಆಸಕ್ತಿ ಹೊಂದಿದಂತಹ ಸರ್ ಸಿದ್ದಪ್ಪ ಕಂಬಳಿ ಅವರ 142ನೇ ಜನ್ಮದಿನದ ಸಂದರ್ಭದಲ್ಲಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು .
ಉಪಮಹಾಪೌರರಾದ ದುರ್ಗಮ್ಮ.ಶ.ಬಿಜವಾಡ , ಪಾಲಿಕೆ ಆಯುಕ್ತರು ಡಾ.ಈಶ್ವರ.ಉಳ್ಳಾಗಡ್ಡಿ , ಪಾಲಿಕೆ ಅಧಿಕಾರಿಗಳು , ಸರ್ ಸಿದ್ದಪ್ಪ ಕಂಬಳಿ ಅವರ ಅಭಿಮಾನಿಗಳು ಇದ್ದರು .