Ad imageAd image

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ರ‌್ಯಾಕಿಂಗ್ ಸ್ಟೇಟಿಂಗ್ ಸ್ಪರ್ಧೆ

Hubballi Dhwani
ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ರ‌್ಯಾಕಿಂಗ್ ಸ್ಟೇಟಿಂಗ್ ಸ್ಪರ್ಧೆ
WhatsApp Group Join Now
Telegram Group Join Now

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ರ‌್ಯಾಕಿಂಗ್ ಸ್ಟೇಟಿಂಗ್ ಸ್ಪರ್ಧೆ

ಹುಬ್ಬಳ್ಳಿ: ಕರ್ನಾಟಕ ರೋಲರ್ ಸ್ಟೇಟಿಂಗ್ ಅಸೋಶಿಯೇಶನ್ ಹಾಗೂ ಧಾರವಾಡ ಜಿಲ್ಲಾ ರೂಲರ್ ಸ್ಟೇಟಿಂಗ್ ಅಸೋಸಿಯೇಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ 4ನೇ ರ‌್ಯಾಕಿಂಗ್ ಸ್ಟೇಟಿಂಗ್ ಸ್ಪರ್ಧೆಯನ್ನು ದಿ. 14 ಮತ್ತು 15ರಂದು ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹತ್ತಿರ ಇರುವ ದತ್ತಾ ಪ್ರಾಪರ್ಟಿಸ್‌ ನಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಕಾಡಪ್ಪನವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು. 1ನೇ ರಾಂಕಿಂಗ್ ಬೆಂಗಳೂರಲ್ಲಿ, 2ನೇ ರ‌್ಯಾಕಿಂಗ್ ಶಿವಮೊಗ್ಗದಲ್ಲಿ 3ನೇ ರ‌್ಯಾಕಿಂಗ್
ಮೈಸೂ ರಿನಲ್ಲಿ ಏರ್ಪಡಿಸಲಾಗಿದ್ದು, ಹುಬ್ಬಳ್ಳಿ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಸೈಟಿಂಗ್ ಸ್ಪರ್ಧೆ ಆಯೋಜಿಸಿದ್ದು, ಇದು 4ನೇ ರ‌್ಯಾಕಿಂಗ್ ಸ್ಪರ್ಧೆಯಾಗಿರುತ್ತದೆ ಎಂದರು.

ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಜೇತರು ಭಾಗವಹಿಸುತ್ತಿದ್ದಾರೆ. ಸುಮಾರು 400 ರಿಂದ 450 ರ ವರೆಗೆ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸ್ಪರ್ಧೆಯಲ್ಲಿ ಇನ್‌ಲೈನ್ ಮತ್ತು ಕ್ವಾರ್ಡ್ ಎಂಬ ಎರಡು ಕೆಟಗ- ರಿಯಲ್ಲಿ ನಡೆಯುವುದು ಐದು ವರ್ಷದ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದರಲ್ಲಿ 6 ಪ್ರಕಾರ ವಯಸ್ಸಿನ ವಿಭಾಗಗಳು ಇರುತ್ತದೆ. ಬಾಲಕಿಂ- ರುರಿಗೆ ಹಾಗೂ ಬಾಲಕರಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗುತ್ತದೆ. 200 ಮೀಟರ್ ನಿಂದ ಹಿಡಿದು 10,000 ಮೀಟರ್ ವರೆಗೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಕರ್ನಾಟಕ ರೂಲರ್ ಸ್ಟೇಟಿಂಗ್ ಅಸೋಶಿಯೇಶನ್ ಕಾರ್ಯದರ್ಶಿ ಇಂದುಧರ ಸೀತಾರಾಮ್ ಉದ್ಘಾಟಿಸುವರು. ಇಂಡಿಯನ್ ಸ್ಟೇಟಿಂಗ್ ಟೀಮ್ ಕೋಚ್ ಎಚ್.ಆರ್. ರವೀಶ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಗಳು ಜರುಗಲಿದೆ ಎಂದರು.

ಗೋಷ್ಠಿಯಲ್ಲಿ ಬಿ.ಎ. ಪಾಟೀಲ, ಡಾ. ಲಿಂಗರಾಜ ಅಂಗಡಿ, ವಸಂತ ಭಸ್ಮ, ಜಗದೀಶ ಜಕರಡ್ಡಿ, ಕೋಚ್ ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರೂಪಾಕ್ಷಿ ಕಮ್ಮಾರ ಮುಂತಾದವರಿದ್ದರು.

 

WhatsApp Group Join Now
Telegram Group Join Now
Share This Article
error: Content is protected !!