ಸೆ.17ರಂದು ವಿಸರ್ಜನಾ ಮೆರವಣಿಗೆ
ಹುಬ್ಬಳ್ಳಿ ; 11 ದಿನಗಳ ಕಾಲ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ, ಮಾರುಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ವಿಗ್ರಹಳನ್ನು ಸೆ.17ರಂದು ಮಂಗಳವಾರ ಮುಂಜಾನೆ 11 ಘಂಟೆಗೆ ದುರ್ಗದ ಬೈಲ ಹುಬ್ಬಳ್ಳಿಯಲ್ಲಿ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಉದ್ಘಾಟನೆ ಸಮಾರಂಭ ಜರಗುವುದು
ಸನ್ನಿಧಾನವನ್ನು ಶ್ರೀ ಮ. ನಿ. ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸುವರು ಉದ್ಘಾಟಕರಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಆಗಮಿಸುವರು ಅತಿಥಿಗಳಾಗಿ ಸಂಸದರಾದ ಜಗದೀಶ ಶೆಟ್ಟರ್, ಜನಪ್ರಿಯ ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಉದ್ದಿಮೆದಾರರಾದ ಜೀತೇಂದ್ರ ಮಜೇಥಿಯಾ, ರವೀಂದ್ರ ರೇವಣಕರ ಆಗಮಿಸುವರು
ಶ್ರೀ ಗಣೇಶ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯು ದುರ್ಗದ ಬೈಲ್ ನಿಂದ ಪ್ರಾರಂಭವಾಗಿ ಮರಾಠಾ ಗಲ್ಲಿ ಕ್ರಾಸ್, ಮೇದಾರ ಓಣಿ, ಧಾಜಿಬಾನ ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ಚೆನ್ನಮ್ಮ ವೃತ್ತ, ಬಸವ ವನ ಮುಖಾಂತರ ಇಂದಿರಾ ಗಾಜಿನಮನೆ ಆವರಣದಲ್ಲಿರುವ ಶ್ರೀ ಗಣೇಶ ಭಾವಿ ಹಾಗೂ ಹೊಸುರಿನಲ್ಲಿರುವ ಶ್ರೀ ಗಣೇಶ ಭಾವಿಯಲ್ಲಿ ಶ್ರೀ ಗಣೇಶ ವಿಗ್ರಹಗಳ ವಿಸರ್ಜನಾ ಕಾರ್ಯಕ್ರಮ ಜರಗುವುದು ಎಂದು ಅಮರೇಶ ಹಿಪ್ಪರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.