ಹುಬ್ಬಳ್ಳಿ ಮಹಾನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಹಿರಿಯರು ಸಾರ್ವಜನಿಕರು ಮತ್ತು ರೋಗಿಗಳು ಜೀವ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಶೀಘ್ರದಲ್ಲೆ ಹದಗೆಟ್ಟಿ ಎಲ್ಲ ರಸ್ತೆ ಸರಿ ಪಡಿಸುವ ಕ್ರಮ ಜರುಗಿಸಬೇಕು, ಅಲ್ಲದೆ ಪ್ಲೈ ಓವರ್ ಕಾಮಗರಿಗಳಿಂದ ಎಲ್ಲ ರಸ್ತೆಗಳು ಬಂದ ಆಗಿರುವುದರಿಂದ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಮಾಡುವಂತೆ ಕ್ರಮ ಜರುಗಿಸಬೇಕು, ಅಲ್ಲದೆ ಸೂಕ್ತ ಶೌಚಾಲಯಗಳು ಇಲ್ಲದೆ ಸಾರ್ವಜನಿಕರು ಎಲ್ಲಿ ಬೇಕು ಅಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ನಗರದ ಸ್ವಚ್ಛತೆ ಹದಗೆಡುತ್ತಿರುವುದರಿಂದ ಪ್ರತಿ ಎರಡು ಕಿಲೋ ಮೀಟರ್ ಗೊಂದು ಶೌಚಾಲಯ್ ನಿರ್ಮಿಸುವಂತೆ ಆಗ್ರಹಿಸಿದರು, ಅಲ್ಲದೆ ಶುದ್ಧ ಕುಡಿಯುವ ನೀರಿನ ಮಷೀನಗಳು ಹಾಗೂ ಕಸದ ತೊಟ್ಟಿ ಸೇರಿದಂತೆ ಇನ್ನು ಹಲವಾರು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಮಹಾಪೌರರಿಗೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು ಈ ಸಂಧರ್ಭದಲ್ಲಿ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು..
ವರದಿ
ಲೋಹಿತ ಬಸವಾ