ಪವಿತ್ರ ದಸರಾ ಹಬ್ಬದ ಹುಣ್ಣಿಮೆಯ ನಿಮಿತ್ತ ನೂರಾರು ಸಂಖ್ಯೆಯಲ್ಲಿ ಹುಬ್ಬಳ್ಳಿಯು ಸೇರಿದಂತೆ ಬೇರೆ ಬೇರೆ ರಾಜ್ಯ ಹಾಗೂ ಊರುಗಳಿಂದಲೂ ಪವಿತ್ರ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಪಾದಯಾತ್ರೆ ಮೂಲಕ ಕಾಲ್ನಡಿಗೆಯಲ್ಲಿ ದೇವಿಯ ದರ್ಶನಕ್ಕೆ ಅಂತ ಪುಟಾಣಿ ಮಕ್ಕಳಿಂದ ಹಿಡಿದು ವಯೋವ್ರುದ್ದರು ಬರುವುದು ಸರ್ವೇ ಸಾಮಾನ್ಯವಾಗಿದೆ, ನಂಬಿ ಬರುವಂತಹ ಹಾಗೂ ನಂಬಿ ನಡೆಯುವಂತಹ ಭಕ್ತಾದಿಗಳಿಗೆ ಒಳಿತನ್ನು ಉಂಟಾಗುವ ಭಕ್ತಿ ಭಾವದೊಂದಿಗೆ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಬರುವುದು ವಾಡಿಕೆಯಾಗಿದೆ, ಕಾಲ್ನಡಿಗೆಯಲ್ಲಿ ದಣಿದು ಬರುವ ಭಕ್ತಾದಿಗಳಿಗೆ ಸರ್ಕಾರ ಸಮರ್ಪಕ ವ್ಯವಸ್ಥೆಯೊಂದಿಗೆ ದೇವಿಯ ನೇರ ದರ್ಶನಕ್ಕೆ ಉಚಿತ ಪಾಸಗಳನ್ನು ನೀಡುವಂತೆ ಯುವಶಕ್ತಿ ಬಳಗದ ವತಿಯಿಂದ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟವರಿಗೆ ಮನವಿಯನ್ನು ಮಾಡಿಕೊಂಡಿರುವುದಾಗಿ ಯುವಶಕ್ತಿ ಬಳಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..