ಹುಬ್ಬಳ್ಳಿ; ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ನಗರದ ವೀರಾಪುರ ಓಣಿಯಲ್ಲಿ ದಸರಾ ಹಬ್ಬದ ಅಂಗವಾಗಿ ಶಕ್ತಿಯ ಪ್ರತಿರೂಪವಾದ ಶ್ರೀ ಕರಿಯಮ್ಮ ತಾಯಿಯ ಪೂಜಾ ಮತ್ತು ಭಜನಾ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು .
ಪವಿತ್ರ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಮಹಾಪೂಜೆ ಹಾಗೂ ಮಹಾಪ್ರಸಾದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಓಣಿಯ ಗುರು ಹಿರಿಯರು ಮಾತೆಯರು ಹಾಗೂ ನೂರಾರು ಭಕ್ತಾದಿಗಳು ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು ಮಹಾ ಪ್ರಸಾದವನ್ನು ಸವಿದರು, ನೂರಾರು ಮುತ್ತೈದೆಯರು ದೇವಿಗೆ ಆರತಿ ಬೆಳಗುವ ಮೂಲಕ ಹಬ್ಬದ ವಿಶೇಷತೆಯನ್ನು ಮೂಡಿಸಿದರು, ತದ ನಂತರ ಮಹಿಳೆಯರಿಗಾಗಿ ಹಾಗೂ ಪುಟಾಣಿ ಮಕ್ಕಳಿಗಾಗಿ ಮನೋರಂಜನಾ ಕಾರ್ಯಕ್ರಮ ಗಳನ್ನು ಆಯೋಜಿಸಿ ಪುಟಾಣಿ ಮುದ್ದು ಮಕ್ಕಳಿಗೆ ದಾನಿಯರಿಂದ ಬಹುಮಾನ ವಿತರಣೆ ಮಾಡುವಮೂಲಕ
ಪವಿತ್ರ ದಸರಾ ಹಬ್ಬದ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಕ್ರದಲ್ಲಿ ವೀರಾಪುರ ಓಣಿ ಹಾಗೂ ಮಹಾಬಲೇಶ್ವರ ದೇವಸ್ಥಾನದ ಪ್ರಮುಖರು ಸೇರಿದಂತೆ ಓಣಿಯ ಗುರು ಹಿರಿಯರು ಭಕ್ತರು ಭಾಗವಹಿಸಿದ್ದರು.