ಎಸ್. ಎಸ್. ಕೆ.ಸಮಾಜ ಬಾಂಧವರೆಲ್ಲರೂ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿರುವ ಶ್ರೀಮತಿ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣ ಮಂಟಪದಲ್ಲಿ ಸೇರಿ, ಹಿಂದೂ ಧರ್ಮದ ಪುರಾತನ ಹಬ್ಬದಲ್ಲಿ ಒಂದಾಗಿರುವ ಹಾಗೂ ಸಹೋದರತ್ವ ಭ್ರಾತೃತ್ವದ ಸಂದೇಶ ಸಾರುವ ನೂಲು ಹಬ್ಬ ಅಂದರೆ ರಕ್ಷಾ ಬಂಧನವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸುವ ಒಬ್ಬರಿಗೆ ತೊಂದರೆ ಆದರೆ ಮತ್ತೊಬ್ಬರು ಸಹಾಯ ಸಲ್ಲಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡೋಣ ಅಂತ ಹೇಳಿ, ಹರ್ಷದಿಂದ ಈ ಹಬ್ಬವನ್ನು ಆಚರಿಸಿದರು.
ವೇದಿಕೆ ಮೇಲೆ ಸದರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಹುಬ್ಬಳ್ಳಿ ಧಾರವಾಡ ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿಯ ಚೀಫ್ ಟ್ರಸ್ಟಿಗಳಾದ ಸತೀಶ ಮೆಯರವಾಡೆ, ಜಾಯಿಂಟ್ ಚೀಫ್ ಟ್ರಸ್ಟಿ ಶ್ರೀ ಭಾಸ್ಕರ ಎನ್. ಜಿತೂರಿ,ಗೌರವ ಕಾರ್ಯದರ್ಶಿ ಶ್ರೀ ನಾರಾಯಣ ಎನ್. ಖೋಡೆ ,ಸಹ ಗೌರವ ಕಾರ್ಯದರ್ಶಿ ಶ್ರೀ ಟಿ ವಿ ಪೂಜಾರಿ, ಕೋಶಾಧಿಕಾರಿ ಶ್ರೀ ಶ್ರೀಕಾಂತ ಹಬೀಬ, ಮಾಜಿ ಮುಖ್ಯ ಧರ್ಮದರ್ಶಿಗಳಾದ ಶ್ರೀ ಎಫ್. ಕೆ. ದಲಬಂಜನ, ಎಸ್.ಎಸ್.ಕೆ. ಕಾಲೇಜಿನ ಛೇರ್ಮನ್ನರಾದ ಶ್ರೀ ನೀಲಕಂಠ ಪಿ. ಜಡಿ, ಎಸ್. ಎಸ್. ಕೆ. ಬ್ಯಾಂಕಿನ ಛೇರ್ಮನ್ನರಾದ ಶ್ರೀ ವಿಠ್ಠಲ ಲದವಾ, ಹುಡಾ ಮಾಜಿ ಅಧ್ಯಕ್ಷರಾದ ಶ್ರೀ ನಾಗೋಸಾ ಕಲಬುರ್ಗಿ ಉಪಸ್ಥಿತರಿದ್ದು, ಎಲ್ಲರೂ ತಮ್ಮ ತಮ್ಮ ಭಾಷಣದಲ್ಲಿ ಸಮಾಜದ ಏಕತೆಯ ಕುರಿತು ಹಲವು ಅನಿಸಿಕೆಗಳನ್ನು ಸಭಿಕರ ಚಪ್ಪಾಳೆಯೊಂದಿಗೆ ನುಡಿದರು.
ಈ ಸಂದರ್ಭದಲ್ಲಿ ಮಹಿಳಾ ಪ್ರಮುಖರುಗಳಾದ ಕುಮಾರಿ, ರಾಜೇಶ್ರೀ ಜಡಿ,ಶ್ರೀಮತಿ ಪುಷ್ಪಾ ಪವಾರ, ಶ್ರೀಮತಿ ಸರಳಾ ಭಾಂಡಗೆ, ಶ್ರೀಮತಿ ಸೀಮಾ ಲದ್ವಾ ಅವರು ಸಹ ಮಾತನಾಡುತ್ತಾ, ಸಹೋದರತ್ವದ ಬಗ್ಗೆ ಹಾಗೂ ನಮ್ಮ ಸಮಾಜವು ಹೆಣ್ಣು ಮಕ್ಕಳಿಗೆ ನೀಡುವ ಗೌರವದ ಕುರಿತು ಹೇಳಿ,ಈ ಸಮಾಜದಲ್ಲಿ ತಾವು ಹುಟ್ಟಿದ್ದು ಸಂತಸ ತಂದಿರುವದಾಗಿ ಹೇಳಿದರು.
ಈ ಸಮಾರಂಭದಲ್ಲಿ ಕೇಂದ್ರ ಪಂಚ ಸಮಿತಿಯ ಹಾಗೂ ಸಮಾಜದ ಪ್ರಮುಖರುಗಳಾದ ಶ್ರೀರಂಗಾ ಬದ್ಧಿ, ಶ್ರೀ ಲಕ್ಷ್ಮಣ ದಲಬಂಜನ , ಶ್ರೀ ಎನ್.ಎಚ್. ಧರ್ಮದಾಸ, ಶ್ರೀ ಪಿ.ಎ. ಊಟವಾಲೆ, ಶ್ರೀ ಪ್ರೇಮನಾಥ ಧರ್ಮದಾಸ ಸೇರಿದಂತೆ ನೂರಾರು ಪಂಚರು, ಮಹಿಳಾ ಮತ್ತು ಯುವಕ ಪ್ರಮುಖರು ಭಾಗವಹಿಸಿದ್ದರು.