ಅಣ್ಣಿಗೇರಿ; ಜಗಳ ಬಿಡಿಸಲು ಹೋದ ಪೊಲೀಸ್ ಮಹಿಳಾ ಪೇದೆ ಮೇಲೆ ಪಟ್ಟಣದ ಮಹಿಳೆಯೊಬ್ಬಳು ಹಲ್ಲೆ ಮಾಡಿದ ಘಟನೆ ನಡೆದಿದೆ.
58 ವರ್ಷದ ಹನುಮವ್ವ ಗುಲಗಂಜಿ ಎಂಬ ಮಹಿಳೆ ಪೊಲೀಸ್ ಮಹಿಳಾ ಪೇದೆ ಮೇಲೆ ಹಲ್ಲೆ ಮಾಡಿದ್ದಾಳೆ. ಜಾಗದ ವಿಚಾರವಾಗಿ ನಡೆದ ಜಗಳ ಬಿಡಿಸಲು ಪೊಲೀಸ್ ಮಹಿಳಾ ಪೇದೆ ಮುಂದಾದಾಗ ಈ ಕೃತ್ಯ ನಡೆದಿದೆ.
ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.