ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಸರ್ಕಾರಿ ಅರ್ಹ ಆಸಕ್ತ ಅಭ್ಯರ್ಥಿಗಳು ಜೂ. 21ರೊಳಗೆ ಅರ್ಜಿಯನ್ನು ಆದರ್ಶ ವಿದ್ಯಾಲಯದ 7, 8 ಮತ್ತು 9ನೇ ತರಗತಿಯ ಖಾಲಿ ಉಳಿದಿರುವ ಪ್ರವೇಶ ಸ್ಥಾನಗಳಿಗೆ ವಿದ್ಯಾರ್ಥಿಗಳಿಂದ ಆಹ್ವಾನಿಸಲಾಗಿದೆ. 9ನೇ ತರಗತಿಯಲ್ಲಿ 9, 8ನೇ ತರಗತಿಯಲ್ಲಿ 7 ಹಾಗೂ 7ನೇ ತರಗತಿಯಲ್ಲಿ ಸೀಟುಗಳ ಪ್ರವೇಶಕ್ಕೆ ಮೀಸಲಾತಿ ಅನುಗುಣವಾಗಿ ಆಯೆ ಮಾಡಿಕೊಳ್ಳಲಾಗುತ್ತದೆ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಶಾಲಾ ದಾಖಲಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎರಡು ಪಾಸ್‌ಪೋರ್ಟ್ ಸೈಜ್ ಪೋಟೋಗಳ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯ ಎಚ್.ಕೆ. ಗದಗೀನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ