ನೋಟರಿಯಾಗಿ ವಕೀಲ ಕೆ.ಬಿ. ಗುಡಿಹಾಳ ನೇಮಕ
ಕಲಘಟಗಿ: ಕಂದಾಯ ತಾಲೂಕಿನಲ್ಲಿ ನೋಟರಿ ಹುದ್ದೆಗೆ ತಾವರಗೇರಿ ಗ್ರಾಮದ ವಕೀಲರಾದ ಕೆ.ಬಿ. ಗುಡಿಹಾಳ ಅವರನ್ನು ನೋಟರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸದ್ಯ ವಕೀಲರ ಸಂಘದ ಉಪಾಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಂಕರಲಿಂಗ ಬಸವಣ್ಣಪ್ಪ ನೇಸರಗಿ ನಿಧನದಿಂದ ತೆರವಾದ ಹುದ್ದೆಗೆ ಇವರನ್ನು ನೇಮಕ ಮಾಡಲಾಗಿದೆ.