ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಹಿಂದೂ ಅಪ್ರಾಪ್ತೆ ಯುವತಿ ಮೇಲೆ ಅನ್ಯ ಕೋಮಿನ ಯುವಕನಿಂದ ಅತ್ಯಾಚಾರ ಎಸಗಿದಿದ್ದಾನೆ. ಆರೋಪಿಯನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.
ಎಪಿಎಂಸಿಯ ಈಶ್ವರ ನಗರದ ಸದ್ದಾಂಹುಸೇನ್ ಲಿಂಬುವಾಲೆ ಬಂಧಿತ ಆರೋಪಿ.
ನವನಗರ ಕಾಲೇಜ್ ವೊಂದರರಲ್ಲಿ ಅಧ್ಯಯನ ಮಾಡುತ್ತಿದ್ದ ಸದ್ದಾಂ ಹುಸೇನ್ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಪ್ರೀತಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ಗರ್ಭೀಣಿಯನ್ನಾಗಿಸಿದ್ದಾನೆ. ಈ ವಿಚಾರ ನಿಮ್ಮ ಮನೆಯಲ್ಲಿ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಬಾಲಕಿ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋದಾಗ ಗರ್ಭಿಣಿಯಾಗಿರುವುದು ಪಾಲಕರಿಗೆ ಗೊತ್ತಾಗಿದೆ. ಅಷ್ಟೇ ಅಲ್ಲದೇ ಸದ್ದಾಂ ಬಾಲಕಿಯರ ಕುಟುಂಬದವರಿಗೆ ಫೋನ್ ಮೂಲಕ ಕರೆ ಮಾಡಿ ಜಾತಿ ನಿಂದನೆ ಮಾಡಿದ್ದು, ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿದ ಎಬಿವಿಪಿ ಕಾರ್ಯಕರ್ತರು ನವನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲಾಗದ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.