ಮಜೇಥಿಯಾ ಪೌಂಢೇಷನ್‌ನಿಂದ ಕೃತಕ ಕಾಲು ಜೋಡಣೆ
ಹುಬ್ಬಳ್ಳಿ: ಹಲವು ಜನಪರ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ನಗರದ ಮಜೇಥಿಯಾ ಫೌಂಡೇಶನ್ ವತಿಯಿಂದ ಜೂನ್ ೧೬ ಹಾಗೂ ಜು. ೨೮ರಂದು ಎರಡು ಹಂತದಲ್ಲಿ ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ಉಚಿತವಾಗಿ ಕೃತಕ ಕೈ-ಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ವಿ.ಬಿ. ನಿಟಾಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಜೂ. ೧೬ರ ರವಿವಾರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨ ಗಂಟೆವರೆಗೆ ವಿಕಲಚೇತನ ತಪಾಸಣೆ ಮತ್ತು ಕೃತಕ ಕೈ-ಕಾಲು ಅಳತೆ ಪಡೆಯಲಾಗುತ್ತಿದೆ. ಜು. ೨೮ರಂದು ರವಿವಾರ ಮೂರುಸಾವಿರ ಮಠದ ಆವರಣದ ಸಭಾಭವನದಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃತಕ ಕೈ-ಕಾಲು
ಜೋಡಣೆ ಮಾಡಲಾಗುವುದು ಎಂದರು.
ಹುಬ್ಬಳ್ಳಿ ವಿಕಾಸನಗರದಲ್ಲಿ ಶಂಕರ ಆರ್.ಕಾಮಟೆ ಅವರು ನಡೆಸುತ್ತಿರುವ ಯುವರ್ ಪುಟ್, ಇನ್ನರ್ ಇವರ್ ವೇಸ್, ಪ್ರಾಸ್ಪೋಟೆಕ್ ಹಾಗೂ ಆರ್ಥೋಟೆಕ್ ಸೆಂಟರ್ನಲ್ಲಿ ಈ ಕೃತಕ ಕೈ-ಕಾಲು ಸಲಕರಣೆ ತಯಾ- ರಿಸಲಾಗುತ್ತಿದೆ ಎಂದರು.
ಮಜೇಥಿಯಾ ಫೌಂಡೇಶನ್ನಿಂದ ಯುವಕ, ಯುವಕತಿ ಯರಿಗೆ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿರುವ ಹಾಸ್ಟೆಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಉಚಿತ ಹೋಮ್ ನರ್ಸಿಂಗ್ ತರಬೇತಿ ತರಗತಿಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮರೇಶ ಹಿಪ್ಪರಗಿ, ಡಾ. ರಮೇಶ ಬಾಬು, ಅಮೃತ ಇತರರು ಇದ್ದರು.