17 ವರ್ಷದಲ್ಲಿ ದೇಶದ ಮೊದಲ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಉಗಮ
‘ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಜನಸಂಖ್ಯೆ 10 ವರ್ಷಕ್ಕೊಮ್ಮೆ ಕೇವಲ ಶೇ.16ರಷ್ಟು ಏರಿಕೆಯಾಗುತ್ತಿದೆ ಎಂ ದರು. ‘ಅಂಕಿಸಂಖ್ಯೆಗಳ ಪ್ರಕಾರ ಪ್ರ ಸ್ತುತ ರಾಜ್ಯದಲ್ಲಿ ಶೇ.40ರಷ್ಟು ಮುಸ್ಲಿಂ ಜನಸಂಖ್ಯೆಯಿದೆ. 2041ಕ್ಕೆ ಅಸ್ಸಾಂ ಬಹುತೇಕ ಮುಸ್ಲಿಂ ರಾಜ್ಯವಾ ಗಲಿದೆ.‘
ಪ್ರತಿ 10 ವರ್ಷಗಳಿಗೊಮ್ಮೆ, ಅಸ್ಸಾಂ ನಲ್ಲಿ ಮುಸ್ಲಿಂ ಜನಸಂಖ್ಯೆ 11 ಲಕ್ಷ ಏರಿಕೆಯಾಗುತ್ತಿದೆ. ಅಂದರೆ ಶೇ.30 ರಷ್ಟು ಏರಿಕೆ ಆಗುತ್ತಿದೆ. 2041ರ ವೇಳೆಗೆ ಅಸ್ಸಾಂ ಮುಸ್ಲಿಂ ಬಹುಸಂ ಖ್ಯಾತ ರಾಜ್ಯವಾಗಲಿದೆ. ಇದು ವಾಸ್ತವ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಂದು ತಿಳಿಸಿದ್ದಾರೆ.