ಭಜರಂಗಿ ಬಾಯ್ಸ್ ತಂಡಕ್ಕೆ ಜಯ
ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಬಮ್ಮಿಗಟ್ಟಿ ಪ್ರಿಮಿಯರ್ ಲೀಗ್ 2025 ಟೇನಿಸ್ ಬಾಲ್ ಕ್ರಿಕೆಟ್ ೨ನೇ ಆವೃತ್ತಿ ಟೂರ್ನಾಮೆಂಟ್‌ನಲ್ಲಿ ಭಜರಂಗಿ ಬಾಯ್ಸ್ ತಂಡ ಅಭೂತಪೂರ್ವ ಜಯ ಸಾಧಿಸಿದೆ.
ಹನುಮ ಜಯಂತಿ ಮುನ್ನಾ ದಿನವೇ ನಡೆದ
ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ‍್ಸ್ ಬಮ್ಮಿಗಟ್ಟಿ ವಿರುದ್ಧ ಹನುಮನ ಭಕ್ತರು (ಭಜರಂಗಿ ಬಾಯ್ಸ್ ) ವಿಜಯ ಪತಾಕೆ ಹಾರಿಸಿದ್ದಾರೆ.
ಫೈನಲ್ ಹಣಾಹಣಿಯಲ್ಲಿ ಎದುರಾಳಿ ತಂಡ ನೀಡಿದ 86ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ತಂಡ ಎರಡು ಓವರ್ ಬಾಕಿ ಇರುವಂತೆ ಬಾರಿಸಿ ಜಯ ಸಾಧಿಸಿದೆ.
ಭಜರಂಗಿ ಬಾಯ್ಸ್ ತಂಡದ ಈರಣ್ಣ ಕಚ್ಚೂರಿ 28ಎಸೆತಗಳಲ್ಲಿ 57 ರನ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣೀಕರ್ತರಾದರು. ನಾಲ್ಕು ಫೋರ್, ಐದು ಸಿಕ್ಸ್ ಬಾರಿಸಿ ತಮ್ಮ ಅರ್ಧ ಶತಕ ಗಳಿಸಿದರು.