Ad imageAd image

ನವರಾತ್ರಿ ಎರಡನೇ ದಿನ; ಬ್ರಹ್ಮಚಾರಿಣಿ ಪೂಜೆ

Hubballi Dhwani
ನವರಾತ್ರಿ ಎರಡನೇ ದಿನ; ಬ್ರಹ್ಮಚಾರಿಣಿ ಪೂಜೆ
WhatsApp Group Join Now
Telegram Group Join Now

ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತವಸ್ತ್ರಧಾರಿಣಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುವವಳೂ ಆಗಿದ್ದಾಳೆ.

ಬ್ರಹ್ಮಚಾರಿಣಿ ಮಾತೆಗೆ ಸಮರ್ಪಿತವಾದ ಬಣ್ಣವು ಬಿಳಿ. ಏಕೆಂದರೆ ಅವಳು ಬ್ರಹ್ಮಚಾರಿ ಅವತಾರ ಹಾಗೂ ಭಗವಾನ್ ಶಿವನನ್ನು ತನ್ನ ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದಳು ಎನ್ನುವ ನಂಬಿಕೆ ಇದೆ.

ಬ್ರಹ್ಮಚಾರಿಣಿ ದೇವಿಯ ಮಹತ್ವ
ತಪಸ್ಸು, ತ್ಯಾಗ ಮತ್ತು ಅದೃಷ್ಟವನ್ನು ತರುವ ಮಾ ದುರ್ಗೆಯ ಅವತಾರವಾದ ಬ್ರಹ್ಮಚಾರಿಣಿಯನ್ನು ಪೂಜಿಸಲು ಈ ನವರಾತ್ರಿ ಎರಡನೇ ದಿನವನ್ನು ಮೀಸಲಿಡಲಾಗಿದೆ. ಈ ದಿನ ಆಕೆಯನ್ನ ಆರಾಧನೆ ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ. ಅಂದುಕೊಂಡ ಕೆಲಸಗಳನ್ನ ಸಾಧಿಸಬಹುದು. ಇದರ ಜೊತೆಗೆ ಈ ದಿನ ಶಿವನ ಪೂಜೆ ಸಹ ಮಾಡಲಾಗುತ್ತದೆ.

ಅಕ್ಟೋಬರ್ 4 ರಂದು, ವೈಧೃತಿ ಯೋಗವು ಇಡೀ ದಿನ ಮತ್ತು ರಾತ್ರಿಯಲ್ಲಿ ಶನಿವಾರ ಬೆಳಿಗ್ಗೆ 5.21 ರವರೆಗೆ ಇರುತ್ತದೆ. ಅಲ್ಲದೆ, ಚಿತ್ರ ನಕ್ಷತ್ರವು ಶನಿವಾರ ಸಂಜೆ 6:38 ರವರೆಗೆ ಇರುತ್ತದೆ. ಹಾಗಾಗಿ ಶುಕ್ರವಾರ 10:39 ರಿಂದ 12:08 ರವರೆಗೆ ಬಿಟ್ಟು ಉಳಿದ ಸಮಯದಲ್ಲಿ ಪೂಜೆ ಮಾಡಬಹುದು. ಇನ್ನು ಸೂರ್ಯೋದಯದ ನಂತರ ಹಾಗೂ ಸೂರ್ಯಸ್ತದ ಒಳಗೆ ಪೂಜೆ ಮಾಡಬೇಕು. ಅದರ ಪ್ರಕಾರ ಈ ದಿನ ಸೂರ್ಯೋದಯ-ಸೂರ್ಯಾಸ್ತ ಸಮಯ ಸೂರ್ಯೋದಯ – ಬೆಳಗ್ಗೆ 6:15, ಸೂರ್ಯಾಸ್ತ- ಸಂಜೆ 6:03 ಇರಲಿದೆ.

WhatsApp Group Join Now
Telegram Group Join Now
Share This Article
error: Content is protected !!