Ad imageAd image

ಬೆಳೆಹಾನಿ ಬಂದಿಲ್ವಾ; ಈ ನಂಬರ್ ಗೆ ಫೋನ್ ಮಾಡಿ

Hubballi Dhwani
ಬೆಳೆಹಾನಿ ಬಂದಿಲ್ವಾ; ಈ ನಂಬರ್ ಗೆ ಫೋನ್ ಮಾಡಿ
WhatsApp Group Join Now
Telegram Group Join Now

*ಮುಂಗಾರು ಬೆಳೆ ಹಾನಿ ಪರಿಹಾರ;
ಇಲ್ಲಿಯವರೆಗೆ ಜಿಲ್ಲೆಯ 1.06,707 ರೈತರಿಗೆ ರೂ. 108.12 ಕೋಟಿ ಇನಪುಟ್ ಸಬ್ಸಿಡಿ ಜಮೆ ;
ಬಾಕಿ ಉಳಿದ ರೈತರಿಗೆ ಹಂತ-ಹಂತವಾಗಿ ಪರಿಹಾರ
ಧಾರವಾಡ ಜಿಲ್ಲೆಯ ರೈತರು ಈ ನಂಬರ್ ಗಳಿಗೆ ಸಂಪರ್ಕಿಸಿ

ಧಾರವಾಡ :ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಹಂತಗಳಲ್ಲಿ ಒಟ್ಟು 1.06,707 ರೈತರಿಗೆ 108.12 ಕೋಟಿ ರೂ.ಗಳ ಇನಪುಟ್ ಸಬ್ಸಿಡಿ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್‍ಡಿಆರ್‍ಎಫ್ ಅಥವಾ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2 ಸಾವಿರ ರೂ.ಗಳವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಸರ್ಕಾರವು ಆದೇಶಿಸಿದೆ.

ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರ ಮೇಲೆ (FRUITS ID) ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ತುರ್ತಾಗಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಅನುಮೊದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು (FRUITS ID) ಪ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೂ ಪ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ (FRUITS ID) ಪ್ರೂಟ್ಸ್ ಐಡಿ ಸೃಜಿಸಿಕೊಳ್ಳಬಹುದು. (FRUITS ID) ಪ್ರೂಟ್ಸ್ ಐಡಿ ಇಲ್ಲದ ರೈತರು ಬೆಳೆ ಪರಿಹಾರ ಪಡೆಯಲು ಸಾಧ್ಯಾವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ಈ ಕೆಳಕಂಡ ಸಹಾಯವಾಣಿಗಳಿಗೆ ಸಂಪರ್ಕಿಸಬಹುದು. ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ 0836-2233840, 1077, ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಧಾರವಾಡ -0836-2233860, ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯ -0836-2447517, ತೊಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ -0836-2746334, ಧಾರವಾಡ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -0836-2233822, ಹುಬ್ಬಳ್ಳಿ ತಾಲೂಕು ತಹಶೀಲ್ದಾರ ಕಾರ್ಯಾಲಯ -0836-2233844, ಹುಬ್ಬಳ್ಳಿ ನಗರ ತಹಶೀಲ್ದಾರ ಕಾರ್ಯಾಲಯ -0836-2358035, ಕುಂದಗೋಳ ತಾಲೂಕು ತಹಶೀಲ್ದಾರ ಕಾರ್ಯಾಲಯ -08304-290239, ಕಲಘಟಗಿ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -08970-284535, ನವಲಗುಂದ ತಾಲೂಕು ತಹಶೀಲ್ದಾರ ಕಾರ್ಯಾಲಯ – 0830-229240, ಅಣ್ಣಿಗೇರಿ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ – 9008249921 ಹಾಗೂ ಅಳ್ನಾವರ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -0836-2385544 ಗೆ ಸಂಪರ್ಕಿಸಿ ಬೆಳೆ ಪರಿಹಾರ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!