Ad imageAd image

ಕಳ್ಳದಾಸ್ತಾನು ಮಳಿಗೆ ಮಾಲೀಕರ ಪರವಾನಗಿ ರದ್ದು ಮಾಡಿ

Hubballi Dhwani
ಕಳ್ಳದಾಸ್ತಾನು ಮಳಿಗೆ ಮಾಲೀಕರ ಪರವಾನಗಿ ರದ್ದು ಮಾಡಿ
WhatsApp Group Join Now
Telegram Group Join Now

ಕಳ್ಳದಾಸ್ತಾನು ಮಳಿಗೆ ಮಾಲೀಕರ ಪರವಾನಗಿ ರದ್ದು ಮಾಡಿ

ಕಲಘಟಗಿ: ಅಕ್ರಮವಾಗಿ ರಸಗೊಬ್ಬರವನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟ ಪಟ್ಟಣದ ಮಹಾವೀರ ಆಗೋ ಸೆಂಟರ್ ಮಾಲೀಕರ ಪರವಾನಗಿ ರದ್ದು ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್ ಬಸವರಾಜ ಹೊಂಕಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ಮುಂಗಾರು ಹಂಗಾಮಿನ ಬಿತ್ತನೆ ಸಮಯದಲ್ಲಿ ರೈತರಿಗೆ ವಿತರಿಸಬೇಕಾದ 7.5 ಮೆಟ್ರಿಕ್ ಟನ್ ಡಿಎಪಿ ಮತ್ತು 60 ಮೆಟ್ರಿಕ್ ಟನ್ ರಸಗೊಬ್ಬರವನ್ನು ತಮ್ಮ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿಸಿದ್ದರ ಪರಿಣಾಮವಾಗಿ ಗೋದಾಮುಗಳನ್ನು ಸೀಜ್ ಮಾಡುವುದಲ್ಲದೆ, ರಸಗೊಬ್ಬರ ಮಾಲೀಕರ ಮಾರಾಟ ಪರವಾನಗಿ ರದ್ದು ಮಾಡಬೇಕು. ಪ್ರತಿವರ್ಷ ಮುಂಗಾರು ಸಮಯದಲ್ಲಿ ತಾಲೂಕಿನಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳ ಮಾಲೀಕರು, ಮನಬಂದಂತೆ ಬೆಲೆ ಹೇಳಿ, ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕೆಲವು ಅಂಗಡಿಗಳ ಮಾಲೀಕರು ಬಿತ್ತನೆ ಬೀಜಗಳ ಬೆಲೆಯನ್ನು ತೋಚಿದಂತೆ ಹೇಳುತ್ತಿದ್ದಾರೆ.

ರೈತ ದಿಕ್ಕುತಪ್ಪಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಇಂತಹ ಮಳಿಗೆಗಳ ಬಗ್ಗೆ ನಿಗಾ ವಹಿಸಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಬ್ಬು ಬೆಳೆಗಾರ ಸಂಘದ ರಾಜ್ಯ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಜಿಲ್ಲಾ ಪ್ರಧಾನ ಕಾರ್ಯದಶಿ ಪರಶುರಾಮ ಎತ್ತಿನಗುಡ್ಡ, ಜಿಲ್ಲಾ ಉಪಾಧ್ಯಕ್ಷ ಉಳವಪ್ಪ ಬಳಿಗೇರ, ತಾಲೂಕಾಧ್ಯಕ್ಷ ವಸಂತ ಡಾಕಪ್ಪನವರ, ಮಹೇಶ ಬೆಳಗಾಂವಕರ, ಬಸನಗೌಡ ಸಿದ್ದನಗೌಡ್ರ, ಶೇಖಪ್ಪ ಅಂಗಡಿ, ಸಹದೇವಪ್ಪ ಕುಂಬಾರ, ಮಹಾಂತೇಶ ತಹಶೀಲ್ದಾರ್, ಫಕೀರೇಶ ನೇಸರೆಕರ, ಮಂಜುನಾಥ ಟೊಸುರ, ರಾಮಪ್ಪ ಬಾರಕೇರ ಇತರರಿದ್ದರು.

WhatsApp Group Join Now
Telegram Group Join Now
Share This Article
error: Content is protected !!