ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!

Hubballi Dhwani
ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!
WhatsApp Group Join Now
Telegram Group Join Now

ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ

ಮೌಂ ಟ್‌ ಎವರೆಸ್ಟ್ ಪರ್ವತ ಪ್ರದೇಶದಲ್ಲಿ ಎವರೆಸ್ಟ್‌ ಸ್ವಚ್ಛತಾ ಅಭಿಯಾನವನ್ನು ನೇಪಾಳ ಸೇನೆ ಆರಂಭಿಸಿದೆ. ಈ ಸ್ವಚ್ಛತಾ ಅಭಿಯಾನದಡಿ ಎವರೆಸ್ಟ್‌ ಪರ್ವತದಲ್ಲಿ ಸಂಗ್ರಹಗೊಂಡಿರುವ ಮಾನವ ನಿರ್ಮಿತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಲಾಗಿದೆ. ಈ ಬಾರಿಯ ಅಭಿಯಾನ ‘ಕಸ ನಿರ್ಮೂಲನೆ ಮಾಡಿ; ಹಿಮಾಲಯ ಉಳಿಸಿ’ ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿದೆ.

ಕಠ್ಮಂಡುವಿನಲ್ಲಿ ನೇಪಾಳ ಸೇನಾ ಮುಖ್ಯಸ್ಥ ಜನರಲ್ ಪ್ರಭುರಾಮ್ ಶರ್ಮಾ ಈಚೆಗೆ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಾಗರಮಾತಾ (ಹಿಮಾಲಯ) ಪ್ರದೇಶದಲ್ಲಿ ಮಾನವ ನಿರ್ಮಿತ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ಪರಿಸರ ಕಾಳಜಿಯ ಅಗತ್ಯ ಹೆಚ್ಚಾಗಿದೆ. ಹಿಮಾಲಯ ಪರ್ವತದ ಪರಿಸರ ಸಂರಕ್ಷಣೆ ಸಾರ್ವಜನಿಕ ಕಾಳಜಿಯ ವಿಷಯ ಆಗಿರುವುದರಿಂದ ಈ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ಪಾಲುದಾರರು ಸಹಕರಿಸಬೇಕು ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕೋರಿದ್ದಾರೆ.

ಮೇಜರ್ ಆದಿತ್ಯ ಕರ್ಕಿ ನೇತೃತ್ವದ 12 ಮಂದಿ ನೇಪಾಳ ಯೋಧರ ತಂಡ ಏಪ್ರಿಲ್ 14ರಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ ಈ ಅಭಿಯಾನ ಆರಂಭಿಸಿದೆ. 18 ಶೆರ್ಪಾಗಳ ತಂಡ ಕೂಡ ಈ ಸ್ವಚ್ಛತಾ ಅಭಿಯಾನದಡಿ ನೇಪಾಳ ಸೈನಿಕರೊಂದಿಗೆ ಸಹಕರಿಸಲಿದೆ. ಈ ಅಭಿಯಾನಕ್ಕೆ ನೇಪಾಳದ ಅರಣ್ಯ ಮತ್ತು ಪರಿಸರ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ನೇಪಾಳ ಪರ್ವತಾರೋಹಿಗಳ ಸಂಘಗಳು ನೆರವು ನೀಡುತ್ತಿವೆ. ಈ ಸ್ವಚ್ಛತಾ ಅಭಿಯಾನ 50 ದಿನಗಳವರೆಗೆ ನಡೆಯಲಿದೆ.

WhatsApp Group Join Now
Telegram Group Join Now
Share This Article
error: Content is protected !!