ಭೂಮಿಯತ್ತ ಬರುತ್ತಿದೆ ಅತಿದೊಡ್ಡ ಕ್ಷುದ್ರಗ್ರಹ,
ಜಗತ್ತಿಗೆ ಇದೇ ಕಂಟಕ; ನಾಸಾ ನುಡದಿದೆ ಭವಿಷ್ಯ
ಭೂಮಿಯ ಕಡೆ ಅತ್ಯಂತ ವೇಗದಲ್ಲಿ ಕ್ಷುದ್ರಗ್ರಹ (೨೦೧೪ ಟಿಎನ್೧೭) ಬರುತ್ತಿದೆ. ಈ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. ಇದು ಅಂತಿಂಥ ಕ್ಷುದ್ರಗ್ರಹವಲ್ಲ. ಅತ್ಯಂತ ಭಯಾನಕವಾದದ್ದು, ಗಂಟೆಗೆ ೭೭೨೮೨ ಕಿ.ಮೀ ವೇಗದಲ್ಲಿ ಭೂಮಿಯತ್ತ ಬರುತ್ತಿರುವ ಗ್ರಹ. ಒಂದು ವೇಳೆ ಇದು ಭೂಮಿಗೆ ಅಪ್ಪಳಿಸಿದರೆ ಭೂಮಿಗೆ ದೊಡ್ಡ ಅಘಾತ ಎದುರಾಗಲಿದೆ. ಭೂಮಿಯ ಹಿತದೃಷ್ಟಿಯಿಂದ ವಿಜ್ಞಾನಿಗಳು ಇದರ ಮೇಲೆ ಕಣ್ಣಿಟ್ಟಿದ್ದಾರೆ.
ಈ ಕ್ಷುದ್ರಗ್ರಹವು ಮುಂದಿನ ದಿನಗಳಲ್ಲಿ ನಮ್ಮ ಗ್ರಹದ ಬಳಿ ಹಾದು ಹೋಗಲಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುತ್ತದೆಯಾದರೂ, ನಾಸಾ ಇದನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಎಂದು ತಿಳಿಸಿದೆ.
ಭೂಮಿಯ ಕಡೆಗೆ ಸಾಗುತ್ತಿರುವ ಕ್ಷುದ್ರಗ್ರಹ
ಈ ಕ್ಷುದ್ರಗ್ರಹದ ಸುಮಾರು ೫೪೦ ಅಡಿಗಳಷ್ಟು ಅಗಲವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರ ದೊಡ್ಡ ಗಾತ್ರ ಮತ್ತು ಭೂಮಿಗೆ ಸಾಮೀಪ್ಯ ಇರುವುದರಿಂದ, ಇದನ್ನು ಭವಿಷ್ಯದ ಸಂಭಾವ್ಯ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಭೂಮಿಯ ಸಮೀಪ ಹಾದುಹೋಗುವ ವಸ್ತುಗಳನ್ನು ನಾಸಾ ಕೇಂದ್ರವು ಸೂಕ್ಷ್ಮವಾಗಿ ಅಧ್ಯಯನ, ನಿರಂತರ ನಿಗಾ ಇಡುವ ಕೆಲಸ ಮಾಡುತ್ತಿದೆ. ಈ ಬಾಹ್ಯಾಕಾಶಿಲೆಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಪ್ರಸ್ತುತ ಯಾವುದೇ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ, ಆದರೆ ಭವಿಷ್ಯದಲ್ಲಿ ಕಕ್ಷೆಯಲ್ಲಾಗುವ ಸಣ್ಣ ಬದಲಾವಣೆ ಕೂಡ ಅಪಾಯವನ್ನುಂಟುಮಾಡಬಹುದು. ಈ ಕಾರಣಕ್ಕಾಗಿ, ವಿಜ್ಞಾನಿಗಳು ಈ ಆಕಾಶಕಾಯಗಳ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ, ಇದರಿಂದಾಗಿ ಯಾವುದೇ ಸಂಭವನೀಯ ಅಪಾಯವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬಹುದು ಮುಖ್ಯವಾಗಿದೆ.