ಸೂರಶೆಟ್ಟಿಕೊಪ್ಪದಲ್ಲಿ ಡೆಂಗ್ಯೂ ಜಾಗೃತಿ
ಕಲಘಟಗಿ; ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಡೆಂಗ್ಯೂ ಜಾಗೃತಿ ಮೂಡಿಸಲಾಯಿತು.
ಡೆಂಗ್ಯೂ ಜ್ವರ ಹರಡುವಿಕೆ,ನಿಯಂತ್ರಣ,ಜ್ವರದ ಲಕ್ಷಣಗಳು,ಚಿಕಿತ್ಸೆ ಕುರಿತು ಆರೋಗ್ಯ ಇಲಾಖೆ ಸಿಎಚ್ಓ ಶ್ರೀಕಾಂತ ಗೋಕುಲ, ನೋಡಲ್ ಅಧಿಕಾರಿಗಳಾದ ಪಿಡಿಒ ಬಿ.ಎಸ್.ಗಬ್ಬೂರ, ಅವರು ತಿಳಿಸಿದರು. ನಂತರ ಮಕ್ಕಳಿಗೆ ಪ್ರತಿದ್ನಯ ವಿಧಿ ಹೇಳಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು ಸಿಬ್ಬಂದಿ ಹಾಗೂ ,ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು,ಅಡುಗೆ ಸಹಾಯಕರು ಹಾಜರಿದ್ದರು.