ಬಹು ಬೆಳೆ ಒಕ್ಕುವ ಯಂತ್ರ ವಿತರಣೆ
ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರಿಗೆ ಬಹು ಬೆಳೆ ಒಕ್ಕುವ ಯಂತ್ರ ವಿತರಣೆ ಮಾಡಲಾಯಿತು.
೪ ಲಕ್ಷ ಮೌಲ್ಯದ ಬಹು ಬೆಳೆ ಒಕ್ಕುವ ಯಂತ್ರವನ್ನು ನೂಲ್ವಿ ಗ್ರಾಮದ ರೈತ ಬಸವರಾಜ ಬೊಳೆಣ್ಣವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಸನಗೌಡ ಸಿದ್ದನಗೌಡ್ರ ಅವರು, ಕೃಷಿ ಪತ್ತಿನ ಸಹಕಾರಿಗಳಿಂದ ಸಿಗುವ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಯಂತ್ರಗಳ ಖರೀದಿ ಸೌಲ ಸೌಲಭ್ಯ ಒದಗಿಸಲಾಗುತ್ತಿದೆ. ಸಂಘಗಳ ಸೌಲಭ್ಯವನ್ನು ಸದುಪಗಯೋಗ ಪಡೆದುಕೊಳ್ಳಬೇಕು ಎಂದರು.
ಸಿಇಒ ಕಲ್ಲನಗೌಡ್ರ ಮೂಗಣ್ಣವರ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆಯುವ ಸಾಲವನ್ನು ಸಕಾಲಕ್ಕೆ ಮರಳಿಸುವುದರಿಂದ ರೈತರಿಗೂ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ರೈತರು ಒಂದು ಸಾಲವನ್ನು ತೀರಿಸುವ ಮೂಲಕ ಮತ್ತೊಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಭಿತ್ತಿಪತ್ರ ಬಿಡುಗಡೆ: ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸೆ.೨೧ರಿಂದ ನಡೆಯಲಿರುವ ಕೃಷಿ ಮೇಳದ ಭಿತ್ತಿಪತ್ರವನ್ನು ನೂಲ್ವಿ ಗ್ರಾಮ ಪಂಚಾಯತಿಯಲ್ಲಿ ಬಿಡುಗಡೆ ಮಾಡಲಾಯಿತು. ಕ್ಯೂ ಆರ್ ಕೋಡ್ ಸ್ಕಾನ್ ಮಾಡಿಸುವ ಮೂಲಕ ಕೃಷಿ ಮೇಳಕ್ಕೆ ರೈತರ ನೋಂದಣಿ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿ.ಕೆ.ವಸ್ತ್ರದ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕಲ್ಲನಗೌಡ್ರ ಮೂಗಣ್ಣವರ, ಗ್ರಾಮದ ಗುರು ಹಿರಿಯರು ಸೇರಿದಂತೆ ಮತ್ತಿತರರು ಇದ್ದರು.