- ಹಬೀಬವರ ಮೇಲೆ ಸಾಕಷ್ಟು ನಿರೀಕ್ಷೆ
ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿ ಮಠ ವ್ಯಾಪ್ತಿಯ ಎಸ್‌ಎಸ್‌ಕೆ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಹಬೀಬ (ಓಂ ನಮಃ ಶಿವಾಯ) ಆಯ್ಕೆಯಾಗಿದ್ದಾರೆ. ಅಪಾರ ಅನುಭವವುಳ್ಳ ಹಬೀಬ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಹುಬ್ಬಳ್ಳಿ-ಧಾರವಾಡವಷ್ಟೇ ಅಲ್ಲದೇ ರಾಜ್ಯದಲ್ಲಿಯೇ ಮಾದರಿ ಪಂಚಾಯತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ನೂರಾರು ಬಡವರಿಗೆ ನೆರವಾಗಿದ್ದಾರೆ.
ಇತ್ತೀಚೆಗೆ ಈ ಎಲ್ಲ ಪಂಚರು ಹಗಲಿರುಳು ಶ್ರಮಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಇಂದ್ರಪ್ರಸ್ತ ನಗರದಲ್ಲಿ ಸುಮಾರು ೧೮ ಲಕ್ಷ ರೂಪಾಯಿ ವೆಚ್ಚದಲ್ಲಿ ಜಾಗಾ ಖರೀದಿಸಿದ್ದಾರೆ. ಅಲ್ಲಿ ದೇವಸ್ಥಾನವು ಸಹ ಇದೆ. ಜನಸೇವೆ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀ ಸಿದ್ದಾರೂಢ ಸ್ವಾಮಿ ಮಠ ವ್ಯಾಪ್ತಿಯ ಎಸ್‌ಎಸ್‌ಕೆ ಪಂಚಾಯತಿಯ ಸದಸ್ಯರು ಕೇಂದ್ರ ಪಂಚಾಯತಿಯಲ್ಲಿ ೩ ಪ್ರತಿನಿಗಳನ್ನಾಗಿ ಮುಂದುವರೆಯವ ಸಾಧ್ಯತೆಯಿದೆ.