Ad imageAd image

ಪಕೃತಿ ರಕ್ಷಣೆಯ ಸಂದೇಶ ಸಾರುವ ಗಣಪ

Hubballi Dhwani
ಪಕೃತಿ ರಕ್ಷಣೆಯ ಸಂದೇಶ ಸಾರುವ ಗಣಪ
WhatsApp Group Join Now
Telegram Group Join Now

ಪಕೃತಿ ರಕ್ಷಣೆಯ ಸಂದೇಶ ಸಾರುವ ಗಣಪ

ನೀವು ಇಲ್ಲಿ ವಿಘ್ನೇಶ್ವರನ ದರ್ಶನಕ್ಕೆಂದು ಒಳಹೋದರೆ ನಿಮಗೆ ಇಬ್ಬನಿಯೊಳಗೆ ಗೋಚರವಾಗುವ ಪರ್ವತ, ಹಸಿರಿನಿಂದ ಕಂಗೊಳಿಸುತ್ತಿರುವ ಕಾಡು, ಜುಳುಜುಳು ಹರಿಯುವ ನೀರಿನ ಸದ್ದು, ಹಕ್ಕಿಗಳ ಕಲರವ. ಇನ್ನೇನು ಹೊರಬರಬೇಕು ಎನ್ನುವುದರೊಳಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕಾಣುವ ಗಣರಾಜನನ್ನು ನೋಡುತ್ತಿದ್ದಂತೆ ಕಣ್ತೆರೆದು ಭಕ್ತರಿಗೆ ದರ್ಶನ ನೀಡುತ್ತಾನೆ.

ಇದು ಯಾವುದೋ ಚಲನಚಿತ್ರದ ದೃಶ್ಯಾವಳಿಯಲ್ಲ. ಇಲ್ಲಿನ ಎಪಿಎಂಸಿಯ ಈಶ್ವರ ನಗರದ ಗಣೇಶ ಕಾಲನಿಯ ಗಜಪಡೆ ಯುವ ಬಳಗದಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯು ವೈಶಿಷ್ಟ್ಯತೆ. 13ನೇ ವರ್ಷದ ನೆನಪಿಗಾಗಿ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂಕಲ್ಪದಡಿ ಪ್ರಕೃತಿಯ ಮಡಿಲಲ್ಲಿ ಜ್ಞಾನಾಸಕ್ತನಾದ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
10.5 ಅಡಿ ಎತ್ತರದ ಮೂರ್ತಿ:ಈ ಗಣೇಶ ಮೂರ್ತಿ 10.5 ಅಡಿ ಎತ್ತರದಲ್ಲಿದೆ. ಇದರ ಮೈಮೇಲೆ 25 ಕೆಜಿಗೂ ಅಧಿಕ ಮರದ ತೊಗಟೆ(ಚಕ್ಕೆ) ಬಳಸಲಾಗಿದೆ. ಸುತ್ತಲೂ ಆಲದ ಮರದ ಟೊಂಗೆಗಳಿಂದ ಜೋತುಬಿದ್ದ ಜಡೆಬೇರು, ಜುಳುಜುಳು ಹರಿಯುವ ಝರಿ, ಬಗೆಬಗೆಯ ಗಿಡಗಳು, ಹತ್ತಾರು ಬಗೆಯ ಹೂಬಳ್ಳಿ, ಸುತ್ತಲೂ ಹಕ್ಕಿಗಳ ಗೂಡು. ಇವೆಲ್ಲವೂಗಳ ಮಧ್ಯೆ ಜ್ಞಾನಾಸಕ್ತನಾಗಿ ಕುಳಿತ ಗಣಪನನ್ನು ನೋಡುವುದೇ ಚಂದ.

ರೊಬೋಟಿಕ್‌ ಕಣ್ಣು ನಿರ್ಮಾಣ:
ಈ ಗಣಪನ ಕಣ್ಣುಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದಕ್ಕಾಗಿಯೇ ಅಮೆರಿಕಾದಿಂದ ರೋಬೋಟ್‌ ತಂತ್ರಜ್ಞರನ್ನು ಈ ಯುವಬಳಗವೇ ಖರ್ಚು ಮಾಡಿ ಹುಬ್ಬಳ್ಳಿಗೆ ಕರೆಸಿ ಈ ಕಣ್ಣುಗಳನ್ನು ತಯಾರಿಸಿ ಮೂರ್ತಿಗೆ ಅಳವಡಿಸಿದೆ. ಈ ಮೂರ್ತಿಯ ಕಣ್ಣುಗಳು ತನ್ನಿಂದ ತಾನೆಯೇ ತೆರೆಯುವುದು ಮತ್ತು ಮುಚ್ಚುವುದು ಮಾಡುತ್ತದೆ.

ವರ್ಷದ ತಯಾರಿ:
ಈ ಯುವ ಬಳಗವು ಕಳೆದ ಒಂದು ವರ್ಷದಿಂದ ಇದಕ್ಕೆ ಬೇಕಾದ ತಯಾರಿ ನಡೆಸಿದೆ. ಈ ಮೂರ್ತಿ ಪ್ರತಿಷ್ಠಾಪನೆಯ ಹಿಂದೆ 50ಕ್ಕೂ ಅಧಿಕ ಯುವಕರ ಶ್ರಮವಿದೆ. ಇವರಲ್ಲಿ ಪ್ರಮುಖವಾಗಿ 15 ಯುವಕರು ಕಳೆದ 45 ದಿನ ನಿರಂತರವಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಪ್ರಮುಖರಾಗಿರುವ ಮಂಜುನಾಥ ಪಣಸೆ ಹಾಗೂ ಸಂಜು ಪಣಸೆ. ಇವರು ಮೂರ್ತಿ ತಯಾರಿಕೆಯ ಸಂಪೂರ್ಣವಾದ ಖರ್ಚು ನೀಡಿದ್ದಲ್ಲದೇ ಈ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಯಲ್ಲಿ ಕೈಜೋಡಿಸಿದ್ದಾರೆ.

ಕಳೆದ 13 ವರ್ಷಗಳಿಂದ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿರುವ ಗಜಪಡೆ ಯುವ ಬಳಗವು ಪ್ರತಿ ವರ್ಷವೂ ಲಾಲ್‌ಬಾಗ್‌ನ ಸಿಂಹಾಸನಾರೂಢ ವಿಘ್ನೇಶ್ವರನ್ನು ಪ್ರತಿಷ್ಠಾಪಿಸುತ್ತಿತ್ತು. ಕಳೆದ ಮೂರು ವರ್ಷಗಳಿಂದ ವಿಶೇಷ, ವಿಶಿಷ್ಟ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಕಲ್ಪ ತೊಟ್ಟು ಕಳೆದ 2 ವರ್ಷಗಳ ಹಿಂದೆ ನಾಗರ ಹುತ್ತಗಳಲ್ಲಿ ಅಲಂಕೃತಗೊಂಡ ಗಣೇಶ ಮೂರ್ತಿ, ಕಳೆದ ಬಾರಿ ಕೇದರನಾಥ ಮಾದರಿಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿತ್ತು. ಈ ಬಾರಿ ಕಾಡಿನ ಮಧ್ಯ ಜ್ಞಾನಾರೂಢ ವಿಘ್ನೇಶ್ವರ ಪ್ರತಿಷ್ಠಾಪಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!