ಗಂಜಿಗಟ್ಟಿ ಗ್ರಾಮದೇವಿ ಜಾತ್ರಾ ಮಹೋತ್ಸವ;
ಜನಾಕರ್ಷಿಸಿದ ಹೊನ್ನಾಟ
ಕಲಘಟಗಿ; ತಾಲೂಕಿನ ಗಂಜಿಗಟ್ಟಿ ಗ್ರಾಮದ ಶ್ರೀ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ಸಂಭ್ರಮದ ಹೊನ್ನಾಟ ನಡೆಯಿತು.
ರೇವಣಸಿದ್ದೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜನಪದ ಸಾಂಸ್ಕೃತಿಕ ವಾದ್ಯ ಮೇಲುಗಳೊಂದಿಗೆ ಗ್ರಾಮದೇವರನ್ನು ಕುಂಭಮೇಳ ಧಾರ್ಮಿಕ ವಿಧಾನಗಳೊಂದಿಗೆ ನಡೆಯಿತು.
ಮಾ.21 ರಂದು ಸಂಜೆ 6 ಗಂಟೆಗೆ ಜರುಗಲಿರುವ ಧರ್ಮಸಭೆಯಲ್ಲಿ ಮುಕ್ತಿಮಂದಿರದ ಶ್ರೀ ಗುರು ವಿಮಲ ರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳು, ಧರ್ಮಸ್ಥಳ ಧರ್ಮ ಅಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು, ಸಾನ್ನಿಧ್ಯ ವಹಿಸುವರು,
ಕಾರ್ಮಿಕ ಸಚಿವ ಸಂತೋಷ ಲಾಡ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗ್ರಾಮದ ಹಾಲು ಉತ್ಪಾದಕರ ಸಂಘದ ನಿಂಗಯ್ಯ ಕುರಡಿಕೆರಿ, ಮಹಾಪೂರ ರಾಮಣ್ಣ ಬಡಿಗೇರ್, ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗವ್ವ ಹರಿಜನ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮುರಳಿ, ಜಿ,ಪಂ ಮಾಜಿ ಸದಸ್ಯ ಸಿಎಫ್ ಪಾಟೀಲ್, ಶ್ರೀ ಗ್ರಾಮದೇವಿ ಟ್ರಸ್ಟ್ ಸಮಿತಿ ಹಾಗೂ ಜಾತ್ರಾ ಸಮಿತಿ ಸುತ್ತಲಿನ ಗ್ರಾಮಗಳ ಭಕ್ತ ಜನರು ಪಾಲ್ಗೊಳ್ಳುವರು ಪ್ರತಿದಿನ ನನ್ನ ಪ್ರಸಾದ,ಸಂಜೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.