Ad imageAd image

ಡಾ.ಯತೀಂದ್ರರಿಗೆ ಎಂಎಲ್ ಸಿ ಸ್ಥಾನ ನೀಡಿ

Hubballi Dhwani
ಡಾ.ಯತೀಂದ್ರರಿಗೆ ಎಂಎಲ್ ಸಿ ಸ್ಥಾನ ನೀಡಿ
WhatsApp Group Join Now
Telegram Group Join Now

ಹುಬ್ಬಳ್ಳಿ; ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯದ ಪ್ರಮುಖ ಡಾ.ಬಸವರಾಜ ಗೊರವರ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ‌ ಮಾನಾಡಿದ ಅವರು, ಡೈನಾಮಿಕ ಲೀಡರ್ ಡಾ.ಯತೀಂದ್ರ ಸಿದ್ದರಾಮಯ್ಯನವರು ಸಜ್ಜನ, ಸುಶಿಕ್ಷಿತ ರಾಜಕಾರಣಿ, ಯುವಕರ ಕಣ್ಮಣಿ, ತಂದೆಗೆ ಕ್ಷೇತ್ರ ತ್ಯಾಗ ಮಾಡಿ ಚುನಾವಣಾ ಉಸ್ತುವಾರಿಯ ಜವಾಬ್ದಾರಿ ನಿರ್ವಹಿಸಿ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಪ್ರಚಾರಕ್ಕೆ ಸಂಚರಿಸಲು ಸಮಯ ಮಾಡಿ ಕೊಟ್ಟವರು. ಒಂದು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿರುವ ಡಾ.ಯತೀಂದ್ರ ಸಿದ್ಧರಾಮಯ್ಯನವರು ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿರುವರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ರಚನಾತ್ಮಕವಾಗಿ ಕಾರ್ಯಯೋಜನೆ ಮಾಡುವವರು, ಸದರಿ ಚುನಾವಣೆಯಲ್ಲಿ ಅತಿರಥ ಮಹಾರಥರ ಕ್ರಿಯಾಯೋಜನೆಗಳನ್ನು ತಲೆಕೆಳಗೆ ಮಾಡಿದವರು. ಅವರ ರಾಜಕೀಯ ಪ್ರಜ್ಞೆ, ಸಾಮಾಜಿಕ ಕಳಕಳಿ ಸೇವಾಮನೋಭಾವವು ಕರ್ನಾಟಕ ರಾಜ್ಯ ರಾಜಕಾರಣಕ್ಕೆ ಓರ್ವ ಸೈದ್ಧಾಂತಿಕ ನಿಲುವಿನ ಮಹಾ ಮೇಧಾವಿಯನ್ನು ನೀಡಿದಂತಾಗುತ್ತದೆ.

2018 ರಲ್ಲಿ ಮೊದಲ ಬಾರಿಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ರಾಜ್ಯಕ್ಕೆ ಅತೀ ಹೆಚ್ಚು ಮತಗಳ ಅಂತರದಿಂದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟವರು ಅಭಿವೃದ್ಧಿಯ ವೇಗ ಹೆಚ್ಚಿಸಿ ವರುಣಾ ಕ್ಷೇತ್ರದ ರೈತರ ಬೇಡಿಕೆಗಳಿಗೆ ಸ್ಪಂದಿಸಿದವರು ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಜೊತೆ ಜೊತೆಗೆ ರಾಜ್ಯಾದ್ಯಂತ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು. 2023 ರ ಚುನಾವಣೆಯಲ್ಲಿ ಚಾಣಕ್ಯನಂತೆ ಕೆಲಸ ಮಾಡಿದವರು.

ಡಾ.ಯತೀಂದ್ರ ಸಿದ್ದರಾಮಯ್ಯನವರು ಓರ್ವ ಮುತ್ಸದ್ದಿ ನಾಯಕರು ಅಲ್ಲದೇ ಚುನಾವಣೆ ಜಾಳ್ಮೆಯನ್ನು ಮೇರೆದವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಯತೀಂದ್ರ ಸಿದ್ಧರಾಮಯ್ಯನವರು ತಮ್ಮದೇ ಆದ ಚುನಾವಣಾ ತಂತ್ರಗಳಿಂದ ವರುಣಾ ಕ್ಷೇತ್ರದ ಜೊತೆಗೆ ರಾಜ್ಯಾದ್ಯಂತ ತಮ್ಮ ಅಪ್ತರ ಮೂಲಕ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸಿದವರು.

ವಿಶೇಷವಾಗಿ ಸ್ವ-ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ ಎಲ್ ನಂತೋಷ ಅವರ ಎಲ್ಲಾ ತಂತ್ರಗಳನ್ನು ಬುಡಮೇಲು ಮಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣರಾದವರು.

ಸರ್ಕಾರ ಡಾ.ಯತೀಂದ್ರ ಅವರನ್ನು ಎಂಎಲ್ ಸಿ ಗೆ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಧಾರವಾಡ ಜಿಲ್ಲೆಯ ಪ್ರಮುಖರಾದ ಕಾರ್ತಿಕ ಉಪ್ಪಾರ, ಬೆಳಗಾವಿ ಜಿಲ್ಲೆಯ ಪ್ರಮುಖರಾದ ಡಾ.ಜಗದೀಶ್ . ಸರಿಕರ, ಗದಗ ಜಿಲ್ಲೆಯ ಪ್ರಮುಖರಾದ ಚಾ ಮನೋಹರ ಲಮಾಣಿ, ಬಾಗಲಕೋಟೆ ಜಿಲ್ಲೆಯ ಪ್ರಮುಖರಾದ ಸೋಮನಾಥ ಹಳ್ಳಿ, ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!